ಬದಿಯಡ್ಕ: ಕೃಷಿ0iÉುೀ ಜೀವನವಾದಾಗ ಮಾತ್ರ ನಾವು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯ ಎಂಬ ಸಂದೇಶವನ್ನು ಬಸ್ಮಾಜೆ ಸುಬ್ರಹ್ಮಣ್ಯ ಭಟ್ ಶಾಲಾ ಮಕ್ಕಳಿಗೆ ತಿಳಿಸಿದರು. ಸೆಪ್ಟೆಂಬರ್ 26 ಭತ್ತದ ಜನ್ಮ ದಿನಾಚರಣೆ ಎಂಬ ಆಶಯವನ್ನು ಜನರಿಗೆ ತಲುಪಿಸುವುದಕ್ಕಾಗಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆ ಅಗಲ್ಪಾಡಿಯ ಪರಿಸರ ಕ್ಲಬ್ ಹಾಗೂ ಕುಂಬ್ಡಾಜೆ ಕೃಷಿ ಭವನದ ಸಹಯೋಗದಲ್ಲಿ ಸುಬ್ರಹ್ಮಣ್ಯ ಭಟ್ ರ ಭತ್ತದ ಗದ್ದೆಗೆ ಬಯಲು ಪ್ರವಾಸವನ್ನು ಕೈಗೊಳ್ಳಲಾಗಿತ್ತು. ಉತ್ತಮ ಕೃಷಿಕರಾದ ಅವರು ಭತ್ತದ ಹೈಬ್ರಿಡ್ ತಳಿಗಳು, ಅತ್ಯಾಧುನಿಕ ಕೃಷಿ ಉಪಕರಣಗಳು, ಮಳೆ ನೀರು ಕೊಯ್ಲು, ಜೈವಿಕ ಗೊಬ್ಬರಗಳ ಬಳಕೆ ಹಾಗೂ ಆಧುನಿಕ ಯಂತ್ರಗಳ ಬಳಕೆಯ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸಿದರು. ಸಾಗಾಟ ಯಂತ್ರ, ಅಡಿಕೆ ಸುಲಿಯುವ ಯಂತ್ರದ ಉಪಯೋಗದ ಬಗ್ಗೆ ಮಕ್ಕಳು ಕೇಳಿ ತಿಳಿದುಕೊಂಡರು. ಕೃಷಿ ಅಧಿಕಾರಿಗಳಾದ ಸಿಮಿ ಕೆ.ಎಸ್., ಮೋಹನ, ಪ್ರೀತಾ, ಅಧ್ಯಾಪಕರಾದ ನಿತ್ಯಾನಂದ ಬಿ., ಅಪರ್ಣ ಕೆ. ಪ್ರವಾಸದ ನೇತೃತ್ವವನ್ನು ವಹಿಸಿದ್ದರು. ನಾವು ಕೃಷಿಕರಾಗುತ್ತೇವೆ ಆಹಾರದಲ್ಲಿ ಸ್ವಾವಲಂಬಿಗಳಾಗುತ್ತೇವೆ ಎಂಬ ಪ್ರತಿಜ್ಞೆಯನ್ನು ಮಕ್ಕಳು ಇದೇ ಸಂದರ್ಭದಲ್ಲಿ ಕೈಗೊಂಡರು.
ಅಗಲ್ಪಾಡಿ ಶಾಲಾ ಮಕ್ಕಳಿಂದ ಭತ್ತದ ಜನ್ಮ ದಿನಾಚರಣೆ
0
ಅಕ್ಟೋಬರ್ 03, 2019