ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ಜೆಂಡರ್ ಯೋಜನೆಯ ಅಂಗವಾಗಿ ಜಿಲ್ಲೆಯಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ವ್ಯಕ್ತಿಗಳ ಸುರಕ್ಷೆ ಸಹಿತ ಇನ್ನಿತರ ಸೇವೆಗಳನ್ನು ಖಚಿತಪಡಿಸುವ ನಿಟ್ಟಿನಲ್ಲಿ ಆರಂಭಿಸಲಾದ"ಸ್ನೇಹಿತ ಕಾಲಿಂಗ್ ಬೆಲ್" ಚುರುಕುಗೊಳಿಸಲು ಈ ಸಂಬಂಧ ಜರುಗಿದ ಸಭೆ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಹಾಯಕ ಜಿಲ್ಲಾಧಿಕಾರಿ ರಮೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. 3761 ಮಂದಿ(ಏಕಾಂಗಿಯಾಗಿ ವಾಸಿಸುತ್ತಿರುವ)ಯನ್ನು ಈ ಯೋಜನೆಯ ಅಂಗವಾಗಿ ಆಯ್ಕೆಮಾಡಲಾಗಿದೆ. ಹೆಚ್ಚುವರಿ ಸೇವೆ ಇವರಿಗೆ ಒದಗಿಸುವ ನಿಟ್ಟಿನಲ್ಲಿ 2019 ನ.15ರಿಂದ 21 ವರೆಗೆ ಜಿಲ್ಲೆಯಲ್ಲಿ ಸ್ನೇಹಿತ ಕಾಲಿಂಗ್ ಬೆಲ್ ಸಪ್ತಾಹ ನಡೆಸಲಾಗುವುದು. ಯೋಜನೆಯಲ್ಲಿ ಸೇರಿರುವವರ ಬೇಡಿಕೆಗಳನ್ನು ವಿವಿಧ ಇಲಾಖೆಗಳಮುಖ್ಯಸ್ಥರ ಗಮನಕ್ಕೆ ತಂದು, ಅವರಿಗೆ ಬೆಕಾದ ಬೆಂಬಲ ಒದಗಿಸುವ ಯತ್ನ ನಡೆಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಯೋಜನೆಯ ವಿವಿಧ ಚಟುವಟಿಕೆಗಳ ಕುರಿತು ಜಿಲ್ಲಾ ಮಿಷನ್ ಜೆಂಡರ್ ಕಾರ್ಯಕ್ರಮ ಅಧಿಕಾರಿ ಆರತಿ ಮೆನ್, ಅಶ್ವತಿ ಪಿ.ವಿ., ಈಪಾ ಕೆ., ವಿಜಿನಾ ಟಿ.ವಿ. ತರಗತಿ ನಡೆಸಿದರು.
ಸಭೆಯಲ್ಲಿ ಮಹಿಳಾ ಸಂರಕ್ಷಣೆ ಅಧಿಕಾರಿ ಸುನಿತಾ ಎಂವಿ., ಎಲ್.ಎಸ್.ಎ.ವಿಭಾಗ ಅಧಿಕಾರಿ ದಿನೇಶನ್ ಕೆ.,ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಷಾಂಟಿ ಕೆ.ಕೆ., ಸಹಾಯಕ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಷಮೀನ ಎಂ., ಚೈಲ್ಡ್ ಲೈನ್ ಕೌನ್ಸಿಲರ್ ಆಯಿಷತ್, ಹಿರಿಯ ಪ್ರಜೆಗಳ ಫಾರಂ ಕಾರ್ಯದರ್ಶಿ ಸುಕುಮಾರನ್ ಕೆ., ನೆಹರೂ ಯುವಕೇಂದ್ರ ಜಿಲ್ಲಾ ಸಂಚಾಲಕಿ ಜೆಸಿಂತಾ ಡಿಸೋಜಾ, ಜಿಲ್ಲಾ ನಾಗರೀಕ ಪೂರೈಕೆ ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಎಂ.ಝುಲ್ಫೀಕರ್, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರಷೋಬ್, ಸಹಾಯಕ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ರಾಜಗೋಪಾಲ್,ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕಟಿ.ಟಿ.ಸುರೇಂದ್ರನ್, ಹೆಚ್ಚುವರಿ ದಂಡನಾಧಿಕಾರಿ ಸಿ.ಪ್ರಕಾಶನ್ ಪಾಲಾಯಿ ಮೊದಲಾದವರು ಉಪಸ್ಥಿತರಿದ್ದರು.