HEALTH TIPS

ಎಂಡೋಸಲ್ಫಾನ್ :ಇನ್ನು ಸೆಲ್ಫಿ ಚಿತ್ರೀಕರಣ ಬೇಡ: ಜಿಲ್ಲಾಧಿಕಾರಿ

      ಕಾಸರಗೋಡು:  ಎಂಡೋಸಲ್ಫಾನ್ ಸಂತ್ರಸ್ತರ ವಸತಿ ಸಂದರ್ಶನ ಅಂಗವಾಗಿ ಐ.ಸಿ.ಡಿ.ಎಸ್. ಮೇಲ್ವಿಚಾರಕರು ಸೆಲ್ಫಿ ಪಡೆಯುವ ಕ್ರಮವನ್ನು ತುರ್ತಾಗಿ ಹಿಂತೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.     
      ಸಂತ್ರಸ್ತರ ಕ್ಷೇಮವಿಚಾರ ತಿಳಿದುಕೊಳ್ಳುವ, ಪಿಂಚಣಿ ಸಹಿತ ಸೌಲಭ್ಯಗಳು ಕ್ಲಪ್ತ ಸಮಯಕ್ಕೆ ಲಭಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು, ಸಮಸ್ಯೆಗಳಿದ್ದಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ವಿಚಾರಗಳನ್ನು ಎಂಡೋಸಲ್ಫಾನ್ ಸೆಲ್ ಗೆ ವರದಿಮಾಡುವ ಉದ್ದೇಶದಿಂದ ಐ.ಸಿ.ಡಿ.ಎಸ್.ಮೇಲ್ವಿಚಾರಕರಿಗೆ ರಾಜ್ಯ ಸರಕಾರ ಹೊಣೆ ನೀಡಿತ್ತು. ಕಳೆದ 5 ತಿಂಗಳಿಂದ ಪಿಂಚಣಿ ಮೊಟಕುಗೊಂಡಿರುವವರ ಸಮಸ್ಯೆ ಪರಿಹರಿಸಲಾಗಿತ್ತು. ಮುಂದಿನದಿನಗಳಲ್ಲಿಇಂಥಾ ಸಮಸ್ಯೆಗಳು ಪುನರಾವರ್ತನೆಗೊಳ್ಳದಂತೆ ಮೇಲ್ವಿಚಾರಕರು ಸಂತ್ರಸ್ತರ ಮನೆಗಳಿಗೆ ತೆರಳಲು ಮತ್ತು ವಸತಿಗಳಿಗೆ ಭೇಟಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಲು ವಸತಿಗಳಿಗೆ ತೆರಳಿದ ನಂತರ ಸೆಲ್ಫಿ ಚಿತ್ರೀಕರಿಸಿ ರವಾನಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಈ ಆದೇಶ ಪಾಲನೆಯಲ್ಲಿ ಕೆಲವು ಲೋಪದೋಷಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸೆಲ್ಫಿ ಚಿತ್ರೀಕರಣವನ್ನು ನಿಲುಗಡೆಮಾಡಲಾಗಿತ್ತು. ಐ.ಸಿ.ಡಿ.ಎಸ್. ಮೇಲ್ಚಿಚಾರಕರು ಸಂತ್ರಸ್ತರ ಮನೆಗಳಿಗೆ ತೆರಳಿರುವ ವಿಚಾರವನ್ನು ಸೂಕ್ತ ರೀತಿ ವರದಿ ಸಲ್ಲಿಸಬೇಕು. ಅಂಗನವಾಡಿ ಸಿಬ್ಬಂದಿ ಸಹಿತ ಎಲ್ಲ ಮಂದಿ ಇದನ್ನೇ ಆದೇಶವಾಗಿ ಪರಿಶೀಲಿಸಿ ಮುಂದಿನ ಚಟುವಟಿಕೆ ನಡೆಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries