ಕುಂಬಳೆ: ಮಹಾತ್ಮಾ ಗಾಂಧಿಯ 150 ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷ ದೇಶದಾದ್ಯಂತ ನಡೆಸುವ ಸ್ಮೃತಿ ಯಾತ್ರೆ ಕಾರ್ಯಕ್ರಮದ ಅಂಗವಾಗಿ ಕುಂಬಳೆ ಪೇಟೆಯಲ್ಲಿ ಪಾದ ಯಾತ್ರೆ ನಡೆಯಿತು.
ಮಾವಿನಕಟ್ಟೆಯಿಂದ ಆರಂಭಿಸಿ ಕುಂಬಳೆ ಪೇಟೆಯಲ್ಲಿ ಸಂಪನ್ನಗೊಂಡಿತು. ಪಾದಯಾತ್ರೆಯಲ್ಲಿ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಬಳಿಕ ಕುಂಬಳೆ ಪೇಟೆಯಲ್ಲಿ ಸ್ವಚ್ಛ ಭಾರತ ಅಂಗವಾಗಿ ಶುಚೀಕರಣ ಯಜ್ಞ ನಡೆಯಿತು. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್„ಸುವ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಬಿಜೆಪಿ ಜಿಲ್ಲಾ ನೇತಾರರು ಪಾದಯಾತ್ರೆಯಲ್ಲೂ, ಶುಚೀಕರಣ ಶ್ರಮದಾನದಲ್ಲೂ ಭಾಗವಹಿಸಿದರು.