HEALTH TIPS

ಡಾ.ಲಲಿತಾ ಎಸ್.ಎನ್.ಭಟ್ ಕನ್ನಡ ದೇಗುಲದ ಬೃಹತ್ ಅಶ್ವತ್ಥ ವೃಕ್ಷ : ಚಂದ್ರಶೇಖರ ಏತಡ್ಕ

Top Post Ad

Click to join Samarasasudhi Official Whatsapp Group

Qries

     
      ಕಾಸರಗೋಡು: ದಿ.ಡಾ.ಲಲಿತಾ ಎಸ್.ಎನ್.ಭಟ್ ಸುಪ್ರಸಿದ್ಧ ಪ್ರಸೂತಿ ತಜ್ಞೆ. ಅಪ್ಪಟ ಕನ್ನಡಾಭಿಮಾನಿಯಾದ ಅವರು ಭಾಷೆ, ಕಲೆ, ಸಾಹಿತಿ, ಸಂಸ್ಕøತಿಯ ಆರಾಧಕರೂ, ಸಂವರ್ಧಕರೂ ಆಗಿದ್ದರು. ಕಾಸರಗೋಡಿನ `ಅಮ್ಮಾ' ಎಂದೇ ಗುರುತಿಸಿ ಗೌರವಿಸಲ್ಪಡುತ್ತಿದ್ದ ಅವರು ಅಪಾರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಾ ಬಿಡುವಿಲ್ಲದ ಅಲ್ಪ ಸಮಯದಲ್ಲಿಯೂ ಕಾದಂಬರಿ, ವಿವಿಧ ಲೇಖನಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದರು. ಉದಾರ ದಾನಿಯಾಗಿದ್ದ ಅವರು ನಿಜ ಅರ್ಥದಲ್ಲಿ ಬಡವರ, ಅನಾಥರ ಬಂಧುವಾಗಿದ್ದರು. ಸಮಾಜಮುಖೀ ಚಿಂತಕರಾದ ಡಾ|ಲಲಿತಾ ಭಟ್ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆಯೂ, ಹಲವು ಸಂಘಟನೆಗಳ ರೂವಾರಿಯೂ, ಯುವ ಪೀಳಿಗೆಗೆ ಸಮರ್ಥ ಮಾರ್ಗದರ್ಶಕಿಯೂ ಆಗಿದ್ದ ಅವರು ಹಗಲಿರುಳೆನ್ನದೆ ಕನ್ನಡದ ಸಂರಕ್ಷಣೆಗೆ, ಕಲೆ ಸಾಹಿತ್ಯ ಪುರೋಗತಿಗೆ ಮನಸಾ ದುಡಿಯುತ್ತಿದ್ದ ಕರ್ಮಯೋಗಿಯಾಗಿದ್ದರು  ಎಂದು ಹಿರಿಯ ಲೇಖಕ, ಕೃಷಿ ತಜ್ಞ ಚಂದ್ರಶೇಖರ ಏತಡ್ಕ ಹೇಳಿದರು.
      ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರಗಿದ ಡಾ.ಲಲಿತಾ ಎಸ್.ಎನ್.ಭಟ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿ ಮಾತನಾಡಿದರು.
    ಶ್ರೀಮಂತ ಹೋರಾಟಗಾರ್ತಿಯಾಗಿದ್ದ ಡಾ.ಲಲಿತಾ ಭಟ್ ಮಹಿಳಾ ಸಂಘಟನೆ ರೂಪಿಸಿ ತನ್ಮೂಲಕ ಸಮಾಜ ಸೇವೆಗೆ ಅವರನ್ನು ಅಣಿಗೊಳಿಸಿ ಅದಕ್ಕೆ ಕಾಯಕಲ್ಪ ನೀಡಿದರು. ಅಪಾರ ಸಾಧಕಿಯಾದ ಡಾ.ಲಲಿತಾ ಭಟ್ ಕನ್ನಡ ದೇಗುಲದ ಬೃಹತ್ ಅಶ್ವತ್ಥ ವೃಕ್ಷವೆಂದರೆ ಅತಿಶಯೋಕ್ತಿಯಲ್ಲವೆಂದರು.
     ಅತಿಥಿಗಳಾಗಿ ಪಾಲ್ಗೊಂಡ ವಿದ್ವಾಂಸ, ಹಿರಿಯ ಸಾಹಿತಿ ರಾಜಗೋಪಾಲ ಪುಣಿಂಚಿತ್ತಾಯ ಹಾಗು ಹಿರಿಯ ಕನ್ನಡ ಹೋರಾಟಗಾರ, ವೈದ್ಯ, ಸಾಹಿತಿ ಕೆ.ಗಣಪತಿ ಭಟ್ ಲಲಿತಾ ಭಟ್ ಅವರೊಂದಿಗಿನ ಒಡನಾಟದ ಹಲವು ಘಟನೆಗಳನ್ನು ಸ್ಮರಿಸಿದರು.
      ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ವೇದಾವತಿ ಎಸ್. ಅವರು `ಅಪರಾಜಿತೆ' ಕಾದಂಬರಿಯ ಸತ್ವ, ಮಹತ್ವದ ಕುರಿತು ವಿಮರ್ಶೆ ಮಾಡಿದರು. ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಎಸ್.ವಿ.ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಹರಿಣಾಕ್ಷಿ ಭಾವಗೀತೆಯನ್ನು ಸುಮಧುರವಾಗಿ ಹಾಡಿದರು. ಡಾ.ಯು.ಮಹೇಶ್ವರಿ, ಜಯಶೀಲ ಟೀಚರ್, ಟಿ.ಶಂಕರನಾರಾಯಣ ಭಟ್, ಸುಕುಮಾರ ಆಲಂಪಾಡಿ, ಚಂದ್ರಶೇಖರ, ರಘುರಾಮ, ಕೆ.ಭಾಸ್ಕರ, ವಿಶ್ವನಾಥ ರಾವ್, ಜಾಹ್ನವಿ ಟೀಚರ್, ದೇವಕಿ ಜಿ.ಭಟ್, ಲಕ್ಷ್ಮೀಕಾಂತ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries