HEALTH TIPS

ಗೋಮಾತಾ ಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ

Top Post Ad

Click to join Samarasasudhi Official Whatsapp Group

Qries

       
      ಪೆರ್ಲ: ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ಹವ್ಯಕವಲಯದಲ್ಲಿರುವ ಶ್ರೀರಾಮಚಂದ್ರಾಪುರಮಠದ ಅಂಗ ಸಂಸ್ಥೆಯಾದ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುತ್ತಿರುವ ಅಮೃತಧಾರಾ ಗೋಶಾಲೆ ಗೋಲೋಕ, ಬಜಕೂಡ್ಲುವಿನಲ್ಲಿ  ಅ. 28 ರಿಂದ ನ. 4 ರ ವರೆಗೆ ನಡೆಯುತ್ತಿರುವ ಗೋಮಾತಾ ಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ ಕಾರ್ಯಕ್ರಮದ ಮೊದಲನೆಯ ದಿನವಾದ ಅ. 28 ರಂದು ಸಂಜೆ 4.30 ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯ ನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹ ಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ ಹಾಗೂ ದೀಪೋತ್ಸವ ಮಹಾಮಂಡಲ ಧರ್ಮಕರ್ಮ ಖಂಡದ ಸಂಯೋಜಕರಾದ ವೇದಮೂರ್ತಿ ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ವಲಯ, ಮಂಡಲ ಮತ್ತು ಗೋಶಾಲಾ ಪದಾಧಿಕಾರಿಗಳು ಹಾಗೂ ಗೋಭಕ್ತರ ಸಹಭಾಗಿತ್ವದಲ್ಲಿ ಸಂಪನ್ನಗೊಂಡಿತು.
      ಕಾರ್ಯಕ್ರಮಗಳು ನ. 3ರವರೆಗೆ ಪ್ರತಿದಿನ ಸಂಜೆ 4.30 ರಿಂದ 7.ರ ತನಕ ನಡೆಯಲಿದ್ದು, ನ. 4ರಂದು ದಿನಪೂರ್ತಿ ಗೋಪಾಷ್ಟಮೀ ಮಹೋತ್ಸವ ನಡೆಯಲಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries