ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಶನಿವಾರ ಬೆಳಿಗ್ಗೆ ಶ್ರೀ ಶಾರದಾ ಪ್ರತಿಷ್ಠೆ ಕಾರ್ಯಕ್ರಮ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಕುಂಬಳೆಯ ವೇದಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ನೆರವೇರಿತು.
ಶರನ್ನವರಾತ್ರಿಯ ಪ್ರಯುಕ್ತ ಸೋಮವಾರ ಬೆಳಿಗ್ಗೆ 8.30 ಕ್ಕೆ ವಾಹನ ಪೂಜೆ ನಡೆಯಲಿದೆ. 08 ರಂದು ವಿಜಯದಶಮಿಯ ಶುಭದಿನ ಪ್ರಾತ:ಕಾಲದಲ್ಲಿ ಶ್ರೀ ಗಾಯತ್ರೀ ಮಾತೆಗೆ ಸೀಯಾಳಾಭಿಷೇಕ ನಡೆಯಲಿದ್ದು, ಬೆಳಿಗ್ಗೆ 8.30 ಕ್ಕೆ ವಿದ್ಯಾರಂಭ ಜರಗಲಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಶಾರದಾ ವಿಸರ್ಜನೆ ನಡೆದು, ಬಳಿಕ ಶ್ರೀಗಳವರು ಮಹಾಮಂತ್ರಾಕ್ಷತೆ ಅನುಗ್ರಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀಮಾತೆಯ, ಶ್ರೀನಿತ್ಯಾನಂದ ಗುರುದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಶ್ರಮದ ಪ್ರಕಟಣೆ ತಿಳಿಸಿದೆ.