ಬದಿಯಡ್ಕ: ಏತಡ್ಕ ಕುಂಬ್ಡಾಜೆ ಗ್ರಾಮ ಸೇವಾಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗಮಕ ಕಾರ್ಯಕ್ರಮ ಜರಗಿತು. ನವರಾತ್ರಿ ಆಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕುಮಾರವ್ಯಾಸ ಭಾರತದ `ಕರ್ಣಾವಸಾನ' ಕಥಾಭಾಗವನ್ನು ಆಯ್ದುಕೊಳ್ಳಲಾಗಿತ್ತು. ಮುಳ್ಳೇರಿಯ ಜಿವಿಎಚ್‍ಎಸ್ ಶಾಲೆಯ ಉಪನ್ಯಾಸಕ ಡಾ.ಶಶಿರಾಜ ನೀಲಂಗಳ ವಾಚನದಲ್ಲಿಯೂ, ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ರಾಜಾರಾಮ ಕೆ.ವಿ. ಪ್ರವಚನದಲ್ಲಿಯೂ ಪಾಲ್ಗೊಂಡರು. ಕಲಾವಿದರನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲಾ ವಿ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಿಶೋರ್ ರೈ ಕುಂಡಾಪು, ಗ್ರಂಥಾಲಯದ ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್ ಜೊತೆಗಿದ್ದರು. ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಸ್ವಾಗತಿಸಿ, ಶಾಲಾ ಅಧ್ಯಾಪಕ ಸುಧೀರ್ ಕೃಷ್ಣ ಪಿ.ಎಲ್.ವಂದಿಸಿದರು. ಗ್ರಂಥಾಲಯದ ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.
ಏತಡ್ಕದಲ್ಲಿ ನವರಾತ್ರಿ ಆಚರಣೆಯ ಪ್ರಯುಕ್ತ ಗಮಕ
0
ಅಕ್ಟೋಬರ್ 08, 2019