HEALTH TIPS

ಇಂದು "ಕುಪ್ಪಿ"ಉದ್ಘಾಟನೆ


                               
      ಕಾಸರಗೋಡು:  ಹರಿತ ಕೇರಳಂ ಮಿಷನ್ ಜಿಲ್ಲೆಯಲ್ಲಿ ಜಾರಿಗೊಳಿಸುವ "ಕುಪ್ಪಿ"(ಕಾಸರಗೋಡು ಯೂನಿಕ್ ಪ್ರೋಗ್ರಾಂ ಫಾರ್ ಪ್ಲಾಸ್ಟಿಕ್ ಬಾಟಲ್ ಫ್ರೀ ಯ???) ಯ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು(ಅ.2) ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಶಾಲೆಯ ಎನ್.ಎಸ್.ಎಸ್. ಘಟಕದ ಸಹಕಾರದೊಂದಿಗೆ ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭವನ್ನು ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಉದ್ಘಾಟಿಸುವರು.
      ಕೆ.ಎಸ್.ಇ.ಬಿ. ವ್ಯಾಪ್ತಿಯ ಜಿಲ್ಲೆಯ ಎಲ್ಲ ಕಚೇರಿಗಳನ್ನೂ ಶುಚಿಗೊಳಿಸಲಾಗುವುದು. ಶುಚಿತ್ವ ಜಿಲ್ಲಾ ಇಷನ್ ನೇತೃತ್ವದಲ್ಲಿ ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್ ಉಂಟುಮಾಡುವ ಮಾರಕ ಪರಿಣಾಮ ಕುರಿತು ಜನಜಾಗೃತಿ ಕಾರ್ಯಕ್ರಮನಡೆಸಲಾಗುವುದು. ಸಾಕ್ಷರತಾ ಮಿಷನ್ ನೇತೃತ್ವದಲ್ಲಿ 65 ನಿರಂತಕರ ಕಲಿಕಾ ಕೇಂದ್ರಗಳನ್ನು ಶುಚೀಕರಣಗೊಳಿಸಲಾಗುವುದು.
       ವೈವಿಧ್ಯಮಯ ಕಾರ್ಯಕ್ರಮಗಳು:
         ಗಾಂಧಿ ಜಯಂತಿ ಪಕ್ಷಾಚರಣೆ ಅಂಗವಾಗಿ ಅ.2ರಿಂದ 16 ವರೆಗೆ ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯಲಿವೆ. 
       ನೀಲೇಶ್ವರ ನಗರಸಭೆ ವ್ಯಾಪ್ತಿಯಲ್ಲಿ ಕ್ಲೀನ್ ಗ್ರೀನ್  ನೀಲೇಶ್ವರಂ ಯೋಜನೆ ಜಾರಿಗೊಳ್ಳಲಿದೆ. ಅಂಗನವಾಡಿಗಳನ್ನು ಕೇಂದ್ರೀಕರಿಸಿ ಗಾಂಧಿ ಜಯಂತಿ ದಿನಾಚರಣೆ ನಡೆಯಲಿವೆ. ಪರವನಡ್ಕ ಸರಕಾರಿ ವೃದ್ಧ ಮಂದಿರ ಮತ್ತು ಆವರಣ ಶುಚೀಕರಣ ನಡೆಸಲಾಗುವುದು. ಕೆ.ಎಸ್.ಆರ್.ಟಿ. ಕಚೇರಿಗಳಲ್ಲಿ ಶುಚೀಕರಣ ನಡೆಯಲಿದೆ. ಮೀನುಗಾರಿಕೆ ಇಲಾಖೆ ನೇತೃತ್ವದಲ್ಲಿ ಕರಾವಳಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತೆರವು ಕಾಯಕ ನಡೆಯಲಿವೆ. ಕಾಸರಗೋಡು ಜಿಲ್ಲಾ ಪಂಚಾಯತ್ ನ ನೇತೃತ್ವದಲ್ಲಿ 10 ಶಾಲೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ವಿಚಾರಸಂಕಿರಣ, ಭಾಷಣ,ಚಿತ್ರರಚನೆ, ಭಿತ್ತಿಪತ್ರ ರಚನೆ ಸ್ಪರ್ಧೆಗಳು, ರಸಪ್ರಶ್ನೆ, ಮಾದಕಪದಾರ್ಥ ಬಳಕೆ ವಿರುದ್ಧ ಜನಜಾಗೃತಿ, ವೈದ್ಯಕೀಯ ಶಿಬಿರ, ಜನಜಾಗೃತಿ ವೀಡೀಯೋ ಚಿತ್ರೀಕರಣ , ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ ಜನಜಾಗೃತಿ, ಬರ ಪರಿಹಾರ ಕ್ರಮಗಳು, ಪ್ರಕೃತಿ ದುರಂತಕ್ಕೆ ಮುಂಗಡ ಜಾಗರೂಕತೆ, ಶುಚೀಕರಣ, ಚಿತ್ರಪ್ರದರ್ಶನಗಳು, ಭಾಷಣ ಸರಣಿಗಳು ಇತ್ಯಾದಿ ವಿವಿಧೆಡೆ ನಡೆಯಲಿವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries