HEALTH TIPS

ಭಾರತ ತೊರೆಯಲು ಸಿದ್ಧವಾದ ವೊಡಾಫೋನ್!?

 
       ನವದೆಹಲಿ: ವಿದೇಶಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಸಂಸ್ಥೆ ಭಾರತದಲ್ಲಿ ತನ್ನ ಉದ್ಯಮವನ್ನು ತೊರೆಯಲು ಸಜ್ಜುಗೊಂಡಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿತ್ತು. 
    ಐಎಎನ್ ಎಸ್ ಈ ಬಗ್ಗೆ ವರದಿಪ್ರಕಟಿಸಿದೆ. ಮಾಧ್ಯಮ ಸಂಸ್ಥೆ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ವೊಡಾಫೋನ್ ಸಂಸ್ಥೆ, ಭಾರತದ ವಹಿವಾಟುಗಳನ್ನು ಅಂತ್ಯಗೊಳಿಸುವ ವಿಚಾರ ಕೇವಲ ಊಹಾಪೋಹ ಎಂದು ಹೇಳಿದೆ. ವೊಡಾಫೋನ್-ಐಡಿಯಾ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ನಷ್ಟ ಎದುರಿಸುತ್ತಿದೆ, ಪ್ರತಿ ವರ್ಷವೂ ಲಕ್ಷಾಂತರ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ ಈ ಹಿನ್ನೆಲೆಯಲ್ಲಿ ವೊಡಾಫೋನ್ ಭಾರತದಲ್ಲಿನ ತನ್ನ ಉದ್ಯಮವನ್ನು ತೊರೆಯಲಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವೊಡಾಫೋನ್-ಐಡಿಯಾ ಸಂಸ್ಥೆ ಎಲ್ಲಾ ವದಂತಿಗಳನ್ನೂ ನಿರಾಕರಿಸಿದೆ.
     ವೊಡಾಫೋನ್-ಐಡಿಯಾ ಸಂಸ್ಥೆ ತನಗೆ ಸಾಲ ನೀಡಿರುವ ಸಂಸ್ಥೆಗೆ ಸಾಲದ ಬಾಧ್ಯತೆಗಳನ್ನು ಮರುಹಂಚಿಕೆ ಮಾಡಬೇಕೆಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವೋಡಾಫೋನ್ ಭಾರತ ತೊರೆಯಲು ಮುಂದಾಗಿದೆ ಎಂಬ ವದಂತಿ ಹಬ್ಬಿತ್ತು.
     ಈ ಮಾಹಿತಿಯನ್ನು ತಳ್ಳಿಹಾಕಿರುವ ಸಂಸ್ಥೆ, ನಾವು ಯಾವುದೇ ಮನವಿಯನ್ನೂ ಯಾರಿಗೂ ಮಾಡಿಲ್ಲ. ಎಲ್ಲಾ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲಿದ್ದೇವೆ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries