ಕಾಸರಗೋಡು: ಸಿಪಿಸಿಆರ್‍ಐ-ಐಸಿಎಆರ್‍ನಲ್ಲಿ ರಾಷ್ಟ್ರೀಯ ಏಕತಾ ದಿನವನ್ನು ನಿನ್ನೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಪಿಸಿಆರ್‍ಐ ಮತ್ತು ಐಸಿಎಆರ್ ಸಿಬ್ಬಂದಿಗಳು, ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದರು. ಸಿಪಿಸಿಆರ್‍ಐ ನಿರ್ದೇಶಕಿ ಡಾ.ಅನಿತಾ ಕರುಣ್ ಪ್ರತಿಜ್ಞೆ ಬೋಧಿಸಿದರು. ಎರಿಯಾಲ್ ರಾ.ಹೆದ್ದಾರಿಯಲ್ಲಿ ಇದರ ಅಂಗವಾಗಿ ಸಾಮೂಹಿಕ ಓಟ ನಡೆಯಿತು. ಡಾ.ಮುರಳೀಧರನ್ ವಂದಿಸಿದರು.