ಮಂಜೇಶ್ವರ: ಭಾರತೀಯ ಫೆÇೀಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘ (ಬಿಎಂಎಸ್) ಕಾಸರಗೋಡು ಜಿಲ್ಲಾ ಸಮಿತಿಯ ಕುಟುಂಬ ಸಂಗಮ ಹೊಸಂಗಡಿಯ ಹಿಲ್‍ಸೈಡ್ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ಎ.ಶ್ರೀನಿವಾಸನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಭಾರತದ ಕುಟುಂಬ ಅನ್ನೋದು ಲೋಕಕ್ಕೆ ಆದರ್ಶ ಕುಟುಂಬ. ಕುಟುಂಬದಲ್ಲಿನ ಅನ್ಯೋನ್ಯತೆ, ಆಚಾರ, ವಿಚಾರ, ನಂಬಿಕೆ ಮತ್ತು ಸಂಸ್ಕಾರಯುತ ಸಮಾಜಕ್ಕೆ ಉತ್ತಮ ಸಾಂಪ್ರದಾಯಿಕ ಮನೆತನಗಳ ಪಾತ್ರ ಹಿರಿದು. ಭಾರತೀಯ ಮಜ್ದೂರ್ ಸಂಘದಡಿಯಲ್ಲಿ ಭಾರತೀಯ ಫೆÇೀಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘ ಕಾರ್ಯಾಚರಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಹೆತ್ತವರನ್ನು ಪರಿಚಯಿಸುವಂತಹ, ಅವರಿಗೆ ಸೂಕ್ತ ಆರೋಗ್ಯಕರ ಬದುಕಿಗೆ ನೆರಳಾಗಿ ಜೊತೆಗಿರುವ ಸಂಕಲ್ಪದಲ್ಲಿ ನಾವು ಜೀವನ ನಿರ್ವಹಿಸಬೇಕು. ನಮ್ಮಲ್ಲಿನ ಸಂಘಟನೆಯ ಶಕ್ತಿಯಿಂದ ನಾವು ದುಡಿದರೆ ನಮ್ಮ ಕುಟುಂಬಗಳಲ್ಲಿ ನಾವು ಸಂತೃಪ್ತ ಜೀವನವನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಭಾರತೀಯ ಫೆÇೀಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘದ ಜಿಲ್ಲಾಧ್ಯಕ್ಷರಾದ ರವಿ ಮಾಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಎಸ್ ಜಿಲ್ಲಾ ಕೋಶಾ„ಕಾರಿ ಅನಿಲ್ ಬಿ.ನಾಯರ್ ಉಪಸ್ಥಿತರಿದ್ದರು. ಭಾರತೀಯ ಫೆÇೀಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘ ಜಿಲ್ಲಾ ಕಾರ್ಯದರ್ಶಿ ಹರಿಕೃಷ್ಣನ್ ಅಜಂತ ಸ್ವಾಗತಿಸಿದರು. ಭಾರತೀಯ ಫೆÇೀಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘ ಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀಧರ ಪೆರ್ಲ ವಂದಿಸಿದರು.