ಕಾಸರಗೋಡು: ವಿಶ್ವ ನೋಟಕ ದಿನಾಚರಣೆ ಅಂಗವಾಗಿ ಜಿಲ್ಲಾ ಕುರುಡುತನ ನಿವಾರಣೆ ಕಾರ್ಯಕ್ರಮದ ನೇತೃತ್ವದಲ್ಲಿ ಮೊಬೈಲ್ ಫೆÇೀಟೋಗ್ರಫಿ ಸ್ಪರ್ಧೆ ನಡೆಯಲಿದೆ. ಮೊದಲನೆಯದು ನೋಟ ಎಂಬ ವಿಷಯದಲ್ಲಿ ಸ್ಪರ್ಧೆ ಜರುಗಲಿದ್ದು, ಮೊಬೈಲ್‍ನಲ್ಲಿ ಕ್ಲಿಕ್ಕಿಸಲಾದ ಅಸಲಿ ಫೆÇೀಟೋವನ್ನು ಸೂಕ್ತ ಶೀರ್ಷಿಕೆ ಸಹಿತ 6282963274 ಎಂಬ ವಾಟ್ಸ್ ಆ್ಯಪ್ ನಂಬ್ರಕ್ಕೆ ಅ.20ರಂದು ಮಧ್ಯಾಹ್ನ 3 ಗಂಟೆಗೆ ಮುಂಚಿತವಾಗಿ ಕಳುಹಿಸಬೇಕು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ರೂಪದಲ್ಲಿ ನಗದು ಲಭಿಸಲಿದೆ.