ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗ ಶೀಲತಾ ಸೆಂಟರ್‍ನ ಆಶ್ರಯದಲ್ಲಿ ಕಾಂಞಂಗಾಡ್ ನೆಹರೂ ಆಟ್ರ್ಸ್ ಮತ್ತು ಸಯನ್ಸ್ ಕಾಲೇಜಿನಲ್ಲಿ ನ.16ರಂದು `ಕವಾಟಂ-2019' ಎಂಬ ಹೆಸರಿನ ಮೆಗಾ ಜಾಬ್ ಫೆಸ್ಟ್ ನಡೆಯಲಿದೆ.
ಈ ಸಂಬಂಧ ಉದ್ಯೋಗದಾತ ಕಂಪನಿಗಳ ನೋಂದಣಿ ಪೂರ್ಣಗೊಂಡಿದೆ. ಖಾಸಗಿ ವಲಯದ ಹಣಕಾಸು, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಎಂಜಿನಿಯರಿಂಗ್ ಸಹಿತ ವಿಭಾಗಗಳ 1500 ಹುದ್ದೆಗಳು ಬರಿದಾಗಿರುವ ಬಗ್ಗೆ ಇಲ್ಲಿ ವರದಿ ಸಲ್ಲಿಸಲಾಗಿದೆ. ಆಸಕ್ತ ಉದ್ಯೋಗಾರ್ಥಿಗಳು ನ.16ರಂದು ಬೆಳಗ್ಗೆ 9 ಗಂಟೆಗೆ ಕಾಲೇಜಿನಲ್ಲಿ ಹಾಜರಾಗಬೇಕು. ಪ್ರವೇಶಾತಿ ಉಚಿತವಾಗಿರುವುದು. ಒಬ್ಬ ಉದ್ಯೋಗಾರ್ಥಿ ಮೂರು ಉದ್ಯೋಗದಾತರ ಮುಂದೆ ಸಂದರ್ಶನಕ್ಕೆ ಹಾಜರಾಗುವ ಅವಕಾಶಗಳಿವೆ. ಮೂರೂ ಕಡೆ ಸಲ್ಲಿಸಬೇಕಾದ ರೀತಿ ಅರ್ಹತಾಪತ್ರಗಳ ನಕಲು ಇತ್ಯಾದಿಗಳನ್ನು ತರಬೇಕು.
ನ.16ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಜಾಬ್ ಫೆಸ್ಟ್ ಉದ್ಘಾಟಿಸುವರು. ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿರುವರು. ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಉಪಸ್ಥಿತರಿರುವರು.