ಕುಂಬಳೆ: ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಸ್ಥೆಯು ಕಳೆದ ವರುಷದಿಂದ ನಡೆಸಿಕೊಂಡು ಬರುತ್ತಿರುವ ಅಪೂರ್ವ ಕಾರ್ಯಕ್ರಮವಾದ "ಕನ್ನಡ ಕಂದನ ಸಿರಿಚಂದನ ಗಿಡ ಯೋಜನೆ"ಯ ಈ ವರುಷದ ಕಾರ್ಯಕ್ರಮವು ನ. 16 ರಂದು ಶನಿವಾರ ಸಂಜೆ ಐದೂವರೆ ಗಂಟೆಗೆ ಕುಂಬಳೆ ಸಮೀಪದ ನಾಯ್ಕಾಪು ಮುಳಿಯಡ್ಕ ಯೋಗೀಶ್ ಅವರ ಮನೆಂಯಲ್ಲಿ ನಡೆಯಲಿದೆ. ಅವರ ಪುತ್ರ ಹಾಗೂ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಕನ್ನಡ ಮಾಧ್ಯಮ ಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿ ರಾಕೇಶ್ ಗಿಡ ನೆಡುವರು. ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಿರಿಚಂದನ ಕನ್ನಡ ಯುವಬಳಗದ ಉಪಾಧ್ಯಕ್ಷ ಪ್ರಶಾಂತ ಹೊಳ್ಳ ಎನ್ ಅಧ್ಯಕ್ಷತೆ ವಹಿಸುವರು.
ಯಕ್ಷಗಾನ ನಾಟ್ಯಗುರು ದಿವಾಣ ಶಿವಶಂಕರ ಭಟ್, ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಯೋಗೀಶ್ ಮುಳಿಯಡ್ಕ, ಮಮತಾ, ಕನ್ನಡ ಕಂದನ ಸಿರಿಚಂದನ ಗಿಡ ಯೋಜನೆಯ ಸಮಿತಿ ಸಂಚಾಲಕ ಕೀರ್ತನ್ ಕುಮಾರ್, ಸಹಸಂಚಾಲಕ ಪ್ರದೀಪ್ ಕುಮಾರ್ ಎಡನೀರು, ಸುಜಿತ್ ಉಪ್ಪಳ ಮುಂತಾದವರು ಉಪಸ್ಥಿತರಿರುವರು.