HEALTH TIPS

ಕಲೋತ್ಸವ ಸ್ವಾಗತಕ್ಕೆ ಸಿದ್ಧಗೊಳ್ಳಲಿದೆ ಬೃಹತ್ ಮಳಲ ಶಿಲ್ಪ: ಬೇಕಲ ಬೀಚ್ ನಲ್ಲಿ 17ರಂದು ನಿರ್ಮಾಣ

   
      ಕಾಸರಗೋಡು: ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಸ್ವಾಗತಕ್ಕಾಗಿ ಬೇಕಲ ಬೀಚ್ ನಲ್ಲಿ ಬೃಹತ್ ಮಳಲ ಶಿಲ್ಪವೊಂದು ನಿರ್ಮಾಣಗೊಳ್ಳಲಿದೆ.
          ಈ ಶಿಲ್ಪದ ನಿರ್ಮಾಣ ನಿಟ್ಟಿನಲ್ಲಿ ಸಂಘಟಕ ಸಮಿತಿ ಪದಾಧಿಕಾರಿಗಳು ಅಹೋರಾತ್ರಿ ದುಡಿಮೆ ನಡೆಸುತ್ತಿದ್ದಾರೆ. ನ.17ರಂದು ಈ ಶಿಲ್ಪ ದ ನಿರ್ಮಾಣ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು. ಕಾಸರಗೋಡಿನ ವಿಶೇಷ ಸಾಂಸ್ಕøತಿಕ ಹಿನ್ನೆಲೆಗೆ ಒತ್ತುನೀಡುವ 20 ಮೀಟರ್ ಉದ್ದದ ಮರಳಿನ ಶಿಲ್ಪ ರಚನೆಗೊಳ್ಳಲಿದೆ. ಅಂದು ಮಧ್ಯಾಹ್ನ 3 ಗಂಟೆ ವೇಳೆಗೆ ಶಿಲ್ಪದ ನಿರ್ಮಾಣ ಪೂರ್ಣಗೊಳ್ಳಲಿದೆ. ಸಚಿವರು, ಜನಪ್ರತಿನಿಧಿಗಳು, ಶಿಲ್ಪಿಗಳು, ಕಲಾವಿದರು, ಕ್ಲಬ್ ಗಳ ಪದಾಧಿಕಾರಿಗಳು, ಸಾರ್ವಜನಕರು ಸೇರದಂತೆ ಸಾವಿರಾರು ಮಂದಿ ಈ ವೇಳೆ ಭಾಗವಹಿಸುವರು.
       ಈ ಸಂದರ್ಭ ಜಾನಪದ ಹಾಡುಗಳ ಗಾಯನ, ಗುರು ವಾದ್ಯ ಸಂಘ ಪಳ್ಳಿಕ್ಕರೆ ಅವರಿಂದ ಶೀಮಗಾರಿ ಮೇಳ ಕಲೋತ್ಸವದ ಪ್ರಚಾರಕ್ಕೆ ಹೊಳಪು ನೀಡಲಿವೆ.
        ಗಾಳಿಪಟ ಉತ್ಸವ: 
     ಜಿಲ್ಲೆಯ ಸಾಂಸ್ಕೃತಿಕ ಹಿನ್ನೆಲೆಯ ಸಂಕೇತ ಹೊಂದಿರುವ ಗಾಳಿಪಟಗಳ ಉತ್ಸವ(ಕೈಟ್ ಫೆಸ್ಟ್) ಅದೇ ದಿನ ಬೇಕಲ ಬೀಚ್ ನಲ್ಲಿ ನಡೆಯಲಿದೆ. ವನ್ ಇಂಡಿಯಾ ಕೈಟ್ ತಂಡ ಟಯೋಟಾ ಸಿರಾಮಿಕ್ಸ್ ಟೈಲ್ಸ್ ಸಂಸ್ಥೆಯ ಸಹಕಾರದೊಂದಿಗೆ ಈ ಉತ್ಸವ ನಡೆಸಲಿದೆ. 8 ಬೃಹತ್ ಗಾತ್ರದ ಗಾಳಿಪಟಗಳ ಸಹಿತ 60 ಗಾಳಿಪಟಗಳ ಹಾರಾಟ ಈ ವೇಳೆ ನಡೆಯಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries