ಕುಂಬಳೆ: ಕುಂಟೆಂಗೇರಡ್ಕ ಸಂಪಿಗೆಕಟ್ಟೆ ಶ್ರೀ ವನದುರ್ಗ, ವನಶಾಸ್ತಾ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ಅಂತಿಮ ಹಂತದವರೆಗೆ ಮುಟ್ಟಿರುತ್ತದೆ. ಇಲ್ಲಿಯ 6 ಸಾನಿಧ್ಯಗಳು ಶ್ರೀ ವನದುರ್ಗಾ, ವನಶಾಸ್ತಾ, ಗುರು ಸಾನಿಧ್ಯ, ನಾಗ ಮತ್ತು ರಕ್ತೇಶ್ವರಿ, ಮಾರಣ ಗುಳಿಗ ಸಾನಿಧ್ಯಗಳು ನೆಲೆ ನಿಂತ ಸ್ಥಳ.
ಕುಂಟೆಂಗರಡ್ಕದಲ್ಲಿರುವ ಸಂಪಿಗೆ ಕಟ್ಟೆ ಇದಕ್ಕೆ ಸಂಬಂಧಪಟ್ಟ ಕೊಳ ಮತ್ತು ಗುವೇ(ಮಟ್ಟೇ)ಮಾಟಂಗುಯಿಯಲ್ಲಿದೆ. ಅರ್ಥಿಕ ಸಮಸ್ಯೆಯ ಕಾರಣ ಕೊಳದ ಜೀರ್ಣೋದ್ಧಾರ ಮಾಡಲು ಅಸಾಧ್ಯವಾಗಿದೆ. ಬಾಕಿ ಇರುವ ಸಾನಿಧ್ಯಗಳ ಜೀರ್ಣೋದ್ಧಾರ ಕೆಲಸಗಳು ಶೇಕಡಾ 60 ರಷ್ಟು ಪೂರ್ತಿಯಾಗುತ್ತಾ ಬಂದಿದ್ದು, ಅದರಿಂದ ಮುಂದಿನ ಬ್ರಹ್ಮಕಲಶೋತ್ಸವ ಆಗೂ ಮುಖ್ಯವಾದ ಇನ್ನಿತರ ಜೀರ್ಣೋದ್ಧಾರ ಕೆಲಸಗಳನ್ನು ಮುಂದುವರಿಸಲು ನ.29 ರಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರಶ್ನೆ ಚಿಂತನೆ ನಡೆಸಲು ತಿರ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಲಾಗಿದೆ.