ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷೆಯ ಮತ್ತೊಂದು ಉಡಾವಣೆಗೆ ಸಿದ್ಧತೆ ನೆಡೆಸಿದೆ. ಪಿಎಸ್ ಎಲ್ ವಿ ಎಸ್ ಇಸಿ-47 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳವಾರ ಬೆಳಿಗ್ಗೆ 5 ಗಂಟೆ 28 ನಿಮಿಷದಲ್ಲಿ ಆರಂಭಗೊಂಡಿರುವ ಕ್ಷಣಗಣನೆ 26 ಗಂಟೆಗಳ ಕಾಲ ಮುಂದುವರಿಯಲಿದೆ.
ಪಿಎಸ ಎಲ್ ವಿ ಎಸ್ ಇಸಿ-47 ಅನ್ನು ಬುಧವಾರ ಬೆಳಿಗ್ಗೆ 9.28 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುವುದು. ರಾಕೆಟ್ ಮೂಲಕ 714 ಕೆಜಿ ತೂಕದ ಕಾರ್ಟೊಸ್ಯಾಟ್-3 ಉಪಗ್ರಹವನ್ನು ಉಡಾಯಿಸಲಿದೆ. ಅಲ್ಲದೆ, ಅಮೆರಿಕಾಗೆ ಸೇರಿದ 13 ವಾಣಿಜ್ಯ ನ್ಯಾನೊ ಉಪಗ್ರಹಗಳನ್ನು ನಭಕ್ಕೆ ಕಳುಹಿಸಲಿದೆ. ಈ ಪೈಕಿ ಫೆÇ್ಲೀಕ್ -4 ಪಿ ಎಂದು ಕರೆಯಲ್ಪಡುವ 12 ಪುಟ್ಟ ಉಪಗ್ರಹಗಳು ಮತ್ತು ಮೆಶ್ಬೆಡ್ ಎಂಬ ಮತ್ತೊಂದು ಚಿಕ್ಕ ಉಪಗ್ರಹವಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನೆಡೆಸಲಾಗುವ 74 ನೇ ಉಡಾವಣೆಯಾಗಿದೆ. ಪಿಎಸ್ ಎಲ್ ವಿ ಎಸ್ ಪಿಸಿ -47 ಉಡಾವಣೆ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಶಿವನ್ ಅವರು ಮಂಗಳವಾರ ಬೆಳಿಗ್ಗೆ ತಿರುಪತಿ ತಿರುಮಲಕ್ಕೆ ಭೇಟಿ ಶ್ರೀ ವೆಂಕಟೇಶ್ವರನ ಆರ್ಶಿವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಕೆಟ್ ಉಡಾವಣೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.