ಮಧೂರು: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯು ಇಲ್ಲಿನ ಕೊಲ್ಯದ ರಾಮ ನಾವಡ ಅವರ ಮನೆಯಲ್ಲಿ ಜರುಗಿದ್ದು ಅಂಗ ಸಂಸ್ಥೆಯ ವತಿಯಿಂದ ಸಾಲಿಗ್ರಾಮ ದೇವಳಕ್ಕೆ ವಾರ್ಷಿಕ ಗುರುಸ್ಥಾನ ಭೇಟಿ ಕಾರ್ಯಕ್ರಮವನ್ನು ಜನವರಿ 5 ರಂದು ನಡೆಸಲು ನಿರ್ಧರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಮಾತನಾಡಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ಇದನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿಸಿದರು.
ಅಂಗ ಸಂಸ್ಥೆಯ ಮುಂದಿನ ಸಂಪರ್ಕ ಸಭೆಯು ಡಿ.1ರಂದು ಅಪರಾಹ್ನ 3 ರಿಂದ ಮಧೂರಿಗೆ ಸಮೀಪದ ಎಲ್ಲಂಗಳದ ವೆಂಕಟೇಶ ರಂಗಾ ಭಟ್ ಅವರ ಆತಿಥ್ಯದಲ್ಲಿ ಜರುಗಲಿದ್ದು, ಸಭೆಯಲ್ಲಿ ಮುಂದಿನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು ಹಾಗೂ ಬಿಲಿಯನ್ ಪೌಂಡೇಶನ್ ವತಿಯಿಂದ ನೀಡಲಾಗುವ ವಿದ್ಯಾಸಹಾಯ ಧನವನ್ನು ವಿತರಿಸಲಾಗುವುದು ಎಂದು ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಮಧೂರು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಕಾರಂತ ಬಿ.ಬನ್ನೂರು, ನಾರಾಯಣ ರಾವ್ ಪೆರ್ಲ, ರಾಜ ಎಂದು ಜಿ.ಏರಿಕ್ಕಳ ಮುಂತಾದವರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಹರಿಕೃಷ್ಣ ನಾವಡ ಸ್ವಾಗತಿಸಿ, ಶಂಕರ ನಾರಾಯಣ ಹೇರಳ ವಂದಿಸಿದರು.