ಕಾಸರಗೊಡು: ರಾಜ್ಯ ಮಟಟದ 60ನೇ ಶಾಲಾ ಕಲೋತ್ಸವದ ಸಿದ್ಧತೆ ಭರದಿಂದ ನಡೆಯುತ್ತಿರುವ ಮಧ್ಯೆ ವಿಜೇತರಿಗೆ ನೀಡಲಿರುವ ಬಂಗಾರದ ಕಪ್ ಸೋಮವಾರ ಜಿಲ್ಲೆಗೆ ತಲುಪಿದೆ. ಕೋಯಿಕ್ಕೋಡಿನಿಂದ ವಾಹನದಲ್ಲಿ ತರಲಾದ ಚಿನ್ನದ ಕಪ್, ಕಾಸರಗೋಡು-ಕಣ್ಣೂರು ಜಿಲ್ಲೆಗಳ ಗಡಿಪ್ರದೇಶ ಕಾಲಿಕಡವಿನಲ್ಲಿ ಸ್ವೀಕರಿಸುವ ಮೂಲಕ ಮೆರವಣಿಗೆ ಮೂಲಕ ಸಮ್ಮೇಳನ ನಗರಕ್ಕೆ ತರಲಾಯಿತು.
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಪಿಲಿಕ್ಕೋಡ್, ಪ್ರಥಮ ಸ್ವಾಗತ ನೀಡುವ ಮೂಲಕ ಚಿನ್ನದ ಕಪ್‍ಗೆ ಸ್ವಾಗತ ಕೋರಲಾಯಿತು. ನಂತರ ಕುಟ್ಟಮತ್ ಶಾಲೆ, ತೋಟಪ್ಪುರಂ, ಹೊಸದುರ್ಗ ಹೈಯರ್ ಸೆಕೆಂಡರಿ, ಲಿಟ್ಲ್ ಪ್ಲವರ್ ಶಾಲೆ ಸಹಿತ ನಾನಾ ಕಡೆ ಸ್ವಾಗತ ನೀಡಿದ ಬಳಿಕ ಕಾಞಂಗಾಡಿಗೆ ತರಲಾಯಿತು.
ಕಲೋತ್ಸವ ರಾತ್ರಿ:
ಶಾಲಾ ಕಲೋತ್ಸವ ಅಂಗವಾಗಿ ನವೆಂಬರ್ ನಿನ್ನೆ ಸಂಜೆ ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದಲ್ಲಿ 'ಕಲೋತ್ಸವ ರಾತ್ರಿ'ಕಾರ್ಯಕ್ರಮ ಜರಗಿಗಿತು. ಈ ಸಂದರ್ಭ ಕಳೆದಬಾರಿ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಎ ಗ್ರೇಡ್ ಲಭಿಸಿದ ವಿದ್ಯಾರ್ಥಿಗಳು, ಖ್ಯಾತ ಕಲಾವಿದರು ಆಯೋಜಿಸುವ ಭರತನಾಟ್ಯ, ಏಕಪಾತ್ರಾಭಿನಯ, ಒಪ್ಪನ, ದಫ್‍ಮುಟ್ಟ್ ಸಹಿತ ವಿವಿಧ ವಿನೋದಾವಳಿಗಳ ಪ್ರದರ್ಶನ ನಡೆಯಿತು. ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು.
ತೆಂಗಿನಗರಿ ಡಸ್ಟ್‍ಬಿನ್:
ರಾಜ್ಯ 60ನೇ ಶಾಲಾ ಕಲೋತ್ಸವ ಸಂದರ್ಭ ಸಂಪೂರ್ಣ ಹಸಿರು ಸಂಹಿತೆಯೊಂದಿಗೆ ಜಾರಿಗೆ ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕಸ ವಿಲೇವಾರಿಗಾಗಿ ತೆಂಗಿನ ಓಲೆಯಿಂದ 150ಬೃಹತ್ ಡಸ್ಟ್‍ಬಿನ್ ತಯಾರಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಈ ಡಸ್ಟ್‍ಬಿನ್ ತಯಾರಿಸುತ್ತಿದೆ. ತೆಂಗಿನಗರಿಯಿಂದ ತಯಾರಿಸಿದ ಡಸ್ಟ್‍ಬಿನ್ ಹಸ್ತಾಂತರ ಕಾರ್ಯಕ್ರಮ ಕಾಞಂಗಾಡಿನಲ್ಲಿ ಜರುಗಿತು. ನಗರಸಭಾ ಅಧ್ಯಕ್ಷ ಪಿ.ವಿ ರಮೇಶನ್ ಅವರಿಗೆ ಸಂಘ ಸಂಸ್ಥೆ ಪದಾಧಿಕಾರಿಗಳು ಡಸ್ಟ್‍ಬಿನ್ ಹಸ್ತಾಂತರಿಸಿದರು. ಕಾಞಂಗಾಡಿನಲ್ಲಿ ನಡೆಯಲಿರುವ ರಾಜ್ಯ ಶಾಲಾ ಕಲೋತ್ಸವದ ಸಿದ್ಧತೆಗಳ ಬಗ್ಗೆ ಕಂದಾಯ ಸಚಿವ ಇ.ಚಂದ್ರಶೇಖರನ್ ಅವಲೋಕನ ನಡೆಸಿದರು. ವೇದಿಕೆಗಳ ತಯಾರಿ ಸಹಿತ ವಿವಿಧ ಸಿದ್ಧತೆಗಳ ಬಗ್ಗೆ ಖುದ್ದು ಮಾಹಿತಿ ಸಂಗ್ರಹಿಸಿದರು.