ಪೆಲ9: ಸು0ದರ ಕಲೆಯಾದ ಯಕ್ಷಗಾನ ಕ್ಷೇತ್ರ ತನ್ನ ಪರಂಪರೆ, ಶಾಸ್ತ್ರೀಯತೆ ಮತ್ತು ಪ್ರೇಕ್ಷನಿಗೆ ನೀಡುವ ತೃಪ್ತಿಯ ಕಾರಣದಿ0ದ ಶ್ರೀಮ0ತವಾಗಿದೆ. ಕಾಲ ಪರಿವತ9ನಶೀಲವಾಗಿದ್ದು ಎಲ್ಲಾ ನೆಲೆಯಲ್ಲೂ ಒಗ್ಗಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಎ0ದು ಹಿರಿಯ ಯಕ್ಷಗಾನ ಕಲಾವಿದ, ದಶಾವತಾರಿ ಕೆ.ಗೋವಿಂದ ಭಟ್ ಸೂರಿಕುಮೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಅಪರಾಹ್ನ ಪೆರ್ಲ ಬಾಲ ಭಾರತಿ ವಿದ್ಯಾಕೇಂದ್ರ(ಬಲಿಪ ಭವನ)ದಲ್ಲಿ ಕನ್ನಡ ನಾಡು-ನುಡಿಗಾಗಿ ಅನನ್ಯ ಸೇವೆಸಲ್ಲಿಸಿ ಅಗಲಿದ ಮಾ.ಭ.ಪೆರ್ಲ ಮತ್ತು ತೆಂಕುತಿಟ್ಟು ಯಕ್ಷಗಾನ ಭಾಗವತಿಕೆಯ ಯುಗಪುರುಷ ದಿ.ಬಲಿಪ ನಾರಾಯಣ ಭಾಗವತರ ಸಂಸ್ಮರಣೆ ಕಾರ್ಯಕ್ರಮ ಹಾಗೂ ವಿಶೇಷ ತಾಳಮದ್ದಳೆ ಸಮಾರ0ಭದಲ್ಲಿ ಪ್ರಸಕ್ತ ಸಾಲಿನ ಬಲಿಪ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಉತ್ತಮ ಪ್ರೋತ್ಸಾಹ ಹಾಗೂ ಅವಕಾಶಗಳಿಗೆ ಕಾರಣವಾಗಿರುವ ಯಕ್ಷಗಾನ ತನ್ನ ಮೂಲ ಸ್ವರೂಪವನ್ನು ಕಾಪಿಡುವಲ್ಲಿ ಹೆಣಗಾಡುತ್ತಿದೆ. ವೈಯುಕ್ತಿಕ ವರ್ಚಸ್ಸು ಗಳಿಸಲು ಮತ್ತು ಆಥಿ9ಕವಾದ ಲಾಭಕ್ಕಾಗಿ ಪರಂಪರೆಗೆ ಧಕ್ಕೆಯಾಗುವ ಸ್ಥಿತಿಯಲ್ಲಿ ಇಂದು ಯಕ್ಷಗಾನ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರ ಜ್ಞಾ ವಂತ ಕಲಾ ಪ್ರೇಮಿಗಳು ಮೌನ ಮುರಿಯಬೇಕಿದೆ. ಕಲಾವಿದರ ಅಭಿಮಾನಿಗಳಾಗುವ ಬದಲಿಗೆ ಸ್ನೇಹಿತರಾದಲ್ಲಿ ಕಲಾವಿದನ ತಪ್ಪುಗಳನ್ನು ತಿದ್ದಿ ಸರಿ ದಾರಿಗೆ ತರುವಲ್ಲಿ ಮು0ದಾಗಬಹುದಾಗಿದೆ ಎಂದು ತಿಳಿಸಿದರು. ತಾನು ಬಲಿಪ ಭಾಗವತರೊಂದಿಗೆ ಸತತ 2 ವಷ9ಗಳ ಕಾಲ ಅಭ್ಯಸಿಸಿದ ಭಾಗವತಿಕೆ, ಹಿಮ್ಮೇಳ ಅಧ್ಯಯನದ ಬಗ್ಗೆ ನೆನಪಿಸಿದರು.
ಸಮಾರಂಭದಲ್ಲಿ ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಸ0ಪಾದಕ ಎ0.ನಾ. ಚಂಬಲ್ತಿಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರದೇಶವೊ ಂದರ ಸಾ0ಸ್ಕೃತಿಕ ಶ್ರೀಮ0ತಿಕೆಯ ಮಾನದ0ಡವು ಕಲೆ-ಸಾಂಸ್ಕøತಿಕ ಚಟುವಟಿಕೆಗಳಾಗಿವೆ. ಗಡಿನಾಡಿನ ಸಾ0ಸ್ಕೃತಿಕ ಕೇ0ದ್ರವಾಗಿದ್ದ ಪೆರ್ಲ ಕನ್ನಡ ನಾಡು-ನುಡಿ, ಕಲೆಗಳಿಗೆ ನೀಡಿದ ಕೊಡುಗೆ ಅಪೂರ್ವ. ಇಂದಿನ, ಮು0ದಿನ ತಲೆಮಾರಿಗೆ ಆ ಪರಂಪರೆ ದಾಟಿಸುವ ಚಟುವಟಿಕೆಗಳು ಆಗಬೇಕು ಎ0ದರು. ಸಂಸ್ಮರಣೆಗಳು ಅಗಲಿದವರ ಹೆಸರಲ್ಲಿ ಬದುಕಿರುವವರು ಕಾಣಿಸಿಕೊಳ್ಳುವ ತವಕ ಇಂದು ಕಾಣಿಸುತ್ತಿದೆ. ನಿನ್ನೆಯ ಇತಿಹಾಸವನ್ನು ನಾಳೆಗೆ ತಲಪಿಸುವ, ಭವಿಷ್ಯದಲ್ಲಿ ನೆನಪಿಸುವ ಕಾಯ9ಕ್ರಮಗಳು ಆಗಬೇಕು ಎಂದು ತಿಳಿಸಿದರು. ಸಾಹಿತ್ಯಕವಾಗಿ, ಸಾಂಸ್ಕøತಿಕ, ಸಾಮಾಜಿಕ, ಧಾರ್ಮಿಕ ಸಂಪದ್ಭರಿತ ಪುಣ್ಯ ಭೂಮಿಯಾಗಿರುವ ಪೆರ್ಲದ ಸಾಹಿತ್ತಿಕ ಚಟುವಟಿಕೆಗಳಿಗೆ ದಿ. ಮಾ.ಭ ಪೆರ್ಲ ಅವರ ಕೊಡುಗೆ ಸ್ಮರಣೀಯ.ಅವರ ನಿಧನದೊಂದಿಗೆ ಪೆರ್ಲದ ಸಾಂಸ್ಕøತಿಕ ಚಟುವಟಿಕೆಗಳ ಕಿರೀಟ ಕಳಚಿದಂತಾಗಿದ್ದು ಅದನ್ನು ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಕನ್ನಡ ರಾಜ್ಯೋತ್ಸವದಂದೇ ಕನ್ನಡ ಭಾಷೆ, ಸಂಸ್ಕøತಿಯ ಏಳಿಗೆಗೆ ದುಡಿದ ಮೇರು ವ್ಯಕ್ತಿಗಳ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡದ ಅಸ್ಮಿತೆಯನ್ನು ಉಳಿಸುವ ಪ್ರಯತ್ನ ನಡೆಯುತ್ತಿರುವುದು ಪೆರ್ಲದ ಸಾಂಸ್ಕøತಿಕ ಚಟುವಟಿಕೆಗಳ ಸಾರ್ಥಕ್ಯದ ಧ್ಯೋತಕ. ವಿವಿಧ ಅನುದಾನಗಳನ್ನು ಬಳಸುವ ಮೂಲಕ ಕಾಟಾಚಾರಕ್ಕೆ ನಡೆಯುವ ಕನ್ನಡ ಪರ ಚಟುವಟಿಕೆಗಳ ಪರಿಣಾಮ ಮಾತ್ರ ಶೂನ್ಯವಾಗಿದೆ.ಜನರ ಜೇಬಿನಿಂದ ಹಣ ವ್ಯಯಿಸಿ ನಡೆಯುವ ಸಾಂಸ್ಕೃತಿಕ, ಸಾಹಿತ್ತಿಕ ಚಟುವಟಿಕೆಗಳಿಂದಲಷ್ಟೇ ಕನ್ನಡ ಭಾಷೆಯ ಉಳಿಯುವಿಕೆ ಹಾಗೂ ಸಮೃದ್ಧ ಬೆಳವಣಿಗೆ ಸಾಧ್ಯ. ಯಕ್ಷಗಾನ ರಂಗದಲ್ಲಿ ಕಳೆದ 70 ವರ್ಷಗಳಿಂದ
ನಿರಂತರ ಕಲಾ ಕಾಣಿಕೆ ಅರ್ಪಿಸುತ್ತಿರುವ ತೆಂಕುತಿಟ್ಟು ಯಕ್ಷಗಾನದ ದಶಾವತಾರಿ ಕಲಾವಿದ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸೂರಿಕುಮೇರು ಗೋವಿಂದ ಭಟ್ ಅವರು ಪ್ರಸಕ್ತ ವರ್ಷದ ಬಲಿಪ ಪ್ರಶಸ್ತಿಗೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರ.ಬಲಿಪ ಪರಂಪರೆಯ ಧ್ಯೋತಕವಾದ ಸ್ಮೃತಿ ಮಂದಿರ ಕಟ್ಟಡ ಸ್ಥುತ್ಯರ್ಹ, ಚಲನಾಶೀಲ ಯಕ್ಷಗಾನ ಅಧ್ಯಯನ ಸಂಶೋಧನಾ ಕೇಂದ್ರವಾಗಿ ಮಾರ್ಪಡಲಿ ಎಂದರು.
ಬಲಿಪ ಪ್ರತಿಷ್ಠಾನದ ಉಪಾಧ್ಯಕ್ಷ ಕೋಟೆ ರಾಮಭಟ್ ಅವರು ದಿ.ಬಲಿಪ ನಾರಾಯಣರ ಭಾಗವತರ ಬಗ್ಗೆ ಹಾಗೂ ಪಾಣಾಜೆ ಸುಬೋಧ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣಭಟ್ ಅವರು ಅಗಲಿದ ಸಾಹಿತಿ, ಕಥೆಗಾರ, ಸಮಾಜಸೇವಕ ಮಾ.ಭ. ಪೆರ್ಲರನ್ನು ಸಂಸ್ಮರಣಾ ಭಾಷಣ ಮಾಡಿದರು. ಯುವ ಭಾಗವತ ಬಲಿಪ ಪ್ರಸಾದ ಭಟ್ ಉಪಸ್ಥಿತರಿದ್ದರು.
ರಾಜಾರಾಮ ಪೆರ್ಲ ಸ್ವಾಗತಿಸಿ, ವೀ.ಜಿ. ಕಾಸರಗೋಡು ವ0ದಿಸಿದರು. ಸತೀಶ ಪುಣಿಚಿತ್ತಾಯ ಪೆರ್ಲ ನಿರೂಪಿಸಿದರು. ಜಯಶ್ರೀ ಪೆಲ9 ಅಭಿನಂದನಾ ಪತ್ರ ವಾಚಿಸಿದರು.
ದಿ. ಬಲಿಪ ನಾರಾಯಣ ಭಾಗವತ ಪ್ರತಿಷ್ಠಾನ ಪೆರ್ಲ ಮತ್ತು ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೊಡು, ಯಕ್ಷಸ್ನೇಹಿ ಬಳಗ ಪೆರ್ಲ ಸಹಯೋಗದಲ್ಲಿ ತಾಳಮದ್ದಳೆ ಕೂಟ ನಡೆಯಿತು. ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಪ್ರಸಾದ ಭಟ್, ಸತೀಶ ಪುಣಿಚಿತ್ತಾಯ ಪೆರ್ಲ, ಮತ್ತು ಚೆಂಡೆ-ಮದ್ದಳೆಯಲ್ಲಿ ಅನೂಪ್ ಸ್ವರ್ಗ, ಶ್ರೀಧರ ಎಡಮಲೆ, ಅರ್ಥಧಾರಿಕೆಯಲ್ಲಿ ಕೋಟೆ ರಾಮ ಭಟ್, ನಾರಾಯಣ ಶಾಸ್ತ್ರಿ ಕೊಲ್ಲೆಂಕಾನ, ಶೇಣಿ ವೇಣುಗೋಪಾಲ ಭಟ್, ನಾರಾಯಣ ಮೂಲಡ್ಕ ಸಹಕರಿಸಿದರು.