ಕುಂಬಳೆ: ಪಾಕ್ ವಿರುದ್ದ ಯುದ್ದದಲ್ಲಿ ಧೀರೋದಾತ್ತನಾಗಿ ಸೆಣಸಿ ವೀರ ಮರಣವನ್ನಪ್ಪಿದ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮರಣಾರ್ಥ ಸೀತಾಂಗೋಳಿಯ ಮೇಜರ್ ಸಂದೀಪ್ ನಗರದ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ನೇತೃತ್ವದಲ್ಲಿ ನಿರ್ಮಿಸಲಾಗುವ ಸಂಘಟನೆಯ ನೂತನ ವಿಸ್ತರಿತ ಕಟ್ಟಡಕ್ಕೆ ಶುಕ್ರವಾರ ಸೀತಾಂಗೋಳಿಯಲ್ಲಿ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಮಾತಾ-ಪಿತೃಗಳಾದ ಉಣ್ಣಿಕೃಷ್ಣನ್ ಹಾಗೂ ಧನಲಕ್ಷ್ಮೀ ಉಣ್ಣಿಕೃಷ್ಣನ್ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಬೇಳ ಚರ್ಚ್‍ನ ಧರ್ಮಗುರು ಫಾದರ್ ಜೋನ್ ವಾಸ್, ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ,ಜಯಂತ ಪಾಟಾಳಿ, ಸುಕುಮಾರ ಕುದ್ರೆಪ್ಪಾಡಿ, ಇ.ಕೆ.ಮೊಹಮ್ಮದ್ ಕುಞÂ್ಞ, ವಿದ್ಯಾ ಗಣೇಶ್ ಅಣಂಗೂರ್, ಅಪ್ಪಣ್ಣ ಎಸ್. ಸೀತಾಂಗೋಳಿ, ಗುರುರಾಜ್ ಸಿ.ಎಸ್, ಮಹಾಲಿಂಗ ಕೆ, ಅನಂತಕೃಷ್ಣ ನೀರ್ಚಾಲು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.