ಕಾಸರಗೋಡು: ಕನ್ನಡ ಭಾಷಾಭಿಮಾನಿಗಳ ಸಮಾಲೋಚನಾ ಸಭೆ ನವೆಂಬರ್ ೯ರಂದು ಬೆಳಿಗ್ಗೆ ೧೦ಕ್ಕೆ ಬೀರಂತಬೈಲಿನ ಕನ್ನಡ ಮಾಧ್ಯಮ ಅಧ್ಯಾಪಕರ ಭವನದಲ್ಲಿ ಜರುಗಲಿದೆ. ಮಂಜೇಶ್ವರ, ಕಾಸರಗೋಡು ಹಾಗೂ ಹೊಸದುರ್ಗ ತಾಲೂಕಿನ ವಿವಿಧ ಕನ್ನಡ ಮಾಧ್ಯಮ ಶಾಳೆಗಳಲ್ಲಿ ಗಣಿತ, ಸಾಮಾಜಿಕ ವಿಜ್ಞಾನ ಮುಂತಾದ ವಿಷಯಗಳಿಗೆ ಬೋಧನೆ ಮಾಡಲು ಕನ್ನಡ ಅರಿಯದ ಶಿಕ್ಷಕರ ನೇಮಕಾತಿ ವಿರುದ್ಧ ಕನ್ನಡ ಹೋರಾಟ ಸಮಿತಿ ವತಿಯಿಂದ ಕನ್ನಡ ಮಕ್ಕಳ ಪೋಷಕರು, ರಕ್ಷಕ-ಶಿಕ್ಷಕ ಸಂಘ ಹಾಗೂ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ನಡೆಸಿರುವ ಹೋರಾಟದಿಂದ ತಾತ್ಕಾಲಿಕ ಪರಿಹಾರ ಲಭಿಸಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ. ವಿದ್ಯಾರ್ಥಿ ಸಹಿತ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ಇಂದು ಕನ್ನಡ ಹೋರಾಟ ಸಮಿತಿ ಸ ಭೆ
0
ನವೆಂಬರ್ 09, 2019