ಬದಿಯಡ್ಕ; ಬದಿಯಡ್ಕದಿಂದ ಬಾರಡ್ಕದವರೆಗೂ ಸಂಚರಿಸುವಾಗ ಅನುಭವವಾಗುವ ಸನ್ನಿವೇಶ. ಕರಿಂಬಿಲದಲ್ಲಿ ಗುಡ್ಡೆಕುಸಿತ ಉಂಟಾಗಿ ರಸ್ತೆಗೆ ಬಿದ್ದ ಮಣ್ಣನ್ನು ಟಿಪ್ಪರ್ ಗಳ ಮೂಲಕ ರಾಶಿ ರಾಶಿಯಾಗಿ ಬೋಳುಕಟ್ಟೆಯಿಂದ ಬಾರಡ್ಕದವರೆಗೂ ರಸ್ತೆಬದಿಯಲ್ಲಿ ಹಾಕಿ ನಾಗರೀಕರಿಗೆ ತೊಂದರೆಯನ್ನು ಉಂಟುಮಾಡುತ್ತಿದೆ. ರಸ್ತೆಯ ಒಂದು ಭಾಗದಲ್ಲಿ ಮಾತ್ರ ನಡೆದುಹೋಗಲು ಸ್ಥಳಾವಕಾಶವಿರುವುದು ಅದರೆ ಅದೇ ಸ್ಥಳದಲ್ಲಿ ಮಣ್ಣು ರಾಶಿ ಹಾಕಿರುವುದು ಅಧಿಕಾರಿಗಳ ಬೇಜಬ್ದಾರಿತನ.
ದಿನಪ್ರಂತಿ ಶಾಲಾ ಮಕ್ಕಳು ಹಾಗು ನಾಗರೀಕರೂ ಮೂಗು ಮುಚ್ಚಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬೋಳುಕಟ್ಟೆ ಪರಿಸರದ ಕನಕಪ್ಪಾಡಿ ತೆರಳುವ ರಸ್ತೆ ಬದಿ ಬೃಹತ್ ಮಣ್ಣ ರಾಶಿ ಕೆಲವೊಮ್ಮೆ ವಾಹನಗಳಿಗೂ ಸುಗಮ ಸಂಚಾರಕ್ಕೆ ತಡೆಯನ್ನುಂಟುಮಾಡುತ್ತಿದೆ. ಕೂಡಲೇ ಸಂಬಂಧಪಟ್ಟವರು ಈ ಮಣ್ಣನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಉಪಯೋಗವಾಗುವ ಹಾಗೆ ಮಾಡಬೇಕೆಂದು ನಾಗರೀಕರು ಒತ್ತಾಯಪಡಿಸುತ್ತಿದ್ದಾರೆ.