ಕಾಸರಗೋಡು: ಎಲ್.ಡಿ.ಸಿ., ಕೆ.ಎ.ಎಸ್. ಸ್ಪರ್ಧಾ ಪರೀಕ್ಷೆಗಳಿಗೆ ಜಿಲ್ಲೆಯಿಂದ ಉದ್ಯೋಗಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆಯ ನೇತೃತ್ವದಲ್ಲಿ ಜಾರಿಗೊಳಿಸುವ "ಉನ್ನತಿ" ಉಚಿತ ತರಬೇತಿಗೆ ಹಾಜರಾಗುವವರ ಆಯ್ಕೆಗೆ ಪ್ರವೇಶಾತಿ ಪರೀಕ್ಷೆ ನಾಳೆ(.೮) ರಂದು ನಾಯನ್ಮಾರುಮೂಲೆ ತನ್ ಬೀಹುಲ್ ಇಸ್ಲಾಮಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಬೆಳಗ್ಗೆ ೧೦ ಗಂಟೆಗೆ ಪರೀಕ್ಷೆ ನಡೆಯಲಿದ್ದು, ಅರ್ಜಿಯೊಂದಿಗೆ ವಯಸ್ಸು, ವಿಳಾಸದ ದಾಖಲಾತಿಯೊಂದಿಗೆ ಬೆಳಗ್ಗೆ ೯ ಗಂಟೆಗೆ ಶಾಲೆಗೆ ಹಾಜರಾಗಬೇಕು. ಆಂಗ್ಲ, ಗಣಿತ, ಜಿಯೋಗ್ರಫಿ, ಸಾಮಾನ್ಯ ಜ್ಞಾನ ಸಹಿತ ೫ ವಿಷಯಗಳಿಗೆ ತಲಾ ೨೦ ಅಂಕಗಳAತೆ ೧೦೦ ಅಂಕಗಳ ಪರೀಕ್ಷೆ ನಡೆಯಲಿದೆ. ಪಿ.ಎಸ್.ಸಿ.ಯ ಪರೀಕ್ಷೆಯಮತೆಯೇ ನೆಗೆಟಿವ್ ಅಂಕವೂ ಇರುವುದು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಹೀಗೊಂದು ಉಚಿತ ತರಬೇತಿ ಜಿಲ್ಲಾಡಳಿತೆಯ ಮೂಲಕ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುವ ಕೆರಿಯರ್ ಗೈಡೆನ್ಸ್ ಸೆಲ್ ನ ಮೇಲ್ನೊಟದಲ್ಲಿ ತರಬೇತಿ ಜರುಗುವುದು. ಜಿಲ್ಲೆಯ ಸರಕಾರಿ ಸಿಬ್ಬಂದಿ ವಲಯದಲ್ಲಿ ಜಿಲ್ಲೆಯಿಂದಲೇ ಉದ್ಯೋಗಾರ್ಥಿಗಳನ್ನು ಒದಗಿಸುವ ಉದ್ದೇಶದೊಂದಿಗೆ ಯೋಜನೆ ಜಾರಿಗೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಸರಕಾರಿ ಸಿಬ್ಬಂದಿಯ ಉಚಿತ ಸೇವೆ ಇಲ್ಲಿ ಬಳಸಿಕೊಳ್ಳಲಾಗುವುದು. ನ.೧೭ರಂದು ಈ ಸಂಬAಧ ತರಗತಿಗಳು ಆರಂಭಗೊಳ್ಳಲಿವೆ. ಉನ್ನತ ಅಧಿಕಾರಿಗಳು ತರಗತಿಗಳಿಗೆ ನೇತೃತ್ವ ವಹಿಸುವರು. ಮಾಹಿತಿಗೆ ದೂರವಾಣಿ ಸಂಖ್ಯೆ: ೦೪೯೯೪-೨೫೫೦೧೦ ಸಂಪರ್ಕಿಸಬಹುದಾಗಿದೆ.