ಬದಿಯಡ್ಕ: ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠ ವತಿಯಿಂದ 'ನಾದೋಪಾಸನ-ರಸಿಕಪ್ರಿಯ'ಸಂಗೀತ ಕಾರ್ಯಕ್ರಮ ನವೆಂಬರ್ ೯ರಂದು ಮಧ್ಯಾಹ್ನ ೩ಕ್ಕೆ ಬಳ್ಳಪದವು ನಾರಾಯಣೀಯಂನಲ್ಲಿ ಜರುಗಲಿದೆ. ಸೌಮ್ಯಾ ಪ್ರದೀಪ್ ಹಾಡುಗಾರಿಕೆ, ಪ್ರಭಾಕರ ಕುಂಜಾರು ವಯಲಿನ್ ಹಾಗೂ ಯೋಗೀಶ್ ಶರ್ಮ ಬಳ್ಳಪದವು ಮೃದಂಗದಲ್ಲಿ ಸಹಕರಿಸುವರು.
ಸಂಜೆ ೪.೩೦ಕ್ಕೆ ನಡೆಯುವ ರಸಿಕಪ್ರಿಯ ಕಾರ್ಯಕ್ರಮದಲ್ಲಿ ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಎಂ. ಸಉಬ್ಬ ರಾವ್ ಅಡೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ವಿದ್ಯಾಶಂಕರ್ ಬೊಳ್ಳಾವ ಅವರಿಂದ ಹಾಡುಗಾರಿಕೆ ನಡೆಯುವುದು. ಸಾಯಂಕಾಲ ೭.೩೦ಕ್ಕೆ ಹಿರಿಯ ವಿದ್ಯಾರ್ಥಿಗಳಿಂದ 'ಸಾಧನಾ'ಸಂಗೀತ ಕಾರ್ಯಕ್ರಮ ಜರುಗಲಿರುವುದು.