ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ಇಂದು(ಶನಿವಾರ)ಅಪರಾಹ್ನ 2.30 ರಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಲ್ಲಿ ಮನೆಯಂಗಳದಿ ಸಾಹಿತ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ ಉದ್ಘಾಟಿಸುವರು. ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿ ಕೆ.ಶಿವರಾಜ್ ಅವರು ಜಾನಪದ ಮಹಾಕಾವ್ಯ-ಆಧುನಿಕ ದೃಷ್ಟಿಕೋನ ಎಂಬ ವಿಷಯದ ಪ್ರಬಂಧ ಮಂಡಿಸುವರು. ಈ ಸಂದರ್ಭ ನಡೆಯುವ ಸಂವಾದದಲ್ಲಿ ಡಿ.ಕಮಲಾಕ್ಷ, ಕವಿತಾ ಕೂಡ್ಲು, ಸನಿಲ್ ಕುಮಾರ್, ಗಣೇಶ್ ಪ್ರಸಾದ್ ನಾಯಕ್, ಶ್ರೀಕುಮಾರಿ ಟೀಚರ್, ಮೋಹನ ಯು.ಮಂಜೇಶ್ವರ ಮೊದಲಾದವರು ಭಾಗವಹಿಸುವರು. ಅಲ್ಲದೆ ಗುಜ್ಜಣಿಗೆ ಬಳಗ ಮಂಜೇಶ್ವರ ತಂಡದಿಂದ ಗೀತ ಗಾಯನ ನಡೆಯಲಿದೆ. ಅಲ್ಲದೆ ಈ ಸಂದರ್ಭ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ, ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅವರನ್ನು ಡಾ.ರಮಾನಂದ ಬನಾರಿಯವರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು ಎಂದು ತಾಲೂಕು ಲೈಬ್ರರಿ ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.