ಕಾಸರಗೋಡು: ಮಿಲ್ಮಾ ಮಲಬಾರ್ ವಲಯ ಸಹಕಾರಿ ಹಾಲು ಉತ್ಪಾದಕರ ಘಟಕದ 30ನೇ ವಾರ್ಷಿಕೋತ್ಸವ ಮತ್ತು ಆಡಳಿತ ಸಮಿತಿ ಘೋಷಿಸಿರುವ ನೂತನ ಯೋಜನೆಗಳ ಜಿಲ್ಲಾ ಮಟ್ಟದ ಉದ್ಘಾಟನೆ ಸೋಮವಾರ ಕಾಞಂಗಾಡ್ ವ್ಯಾಪಾರಭವನದಲ್ಲಿ ಜರುಗಿತು.
ಕಂದಾಯ ಸಚಿವ ಇ.ಚಂದ್ರಶೇಖರನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದಕರ ಕಲ್ಯಾಣಕ್ಕೆ ಆದ್ಯತೆ ಕಲ್ಪಿಸಿ 'ಕೃಷಿ ಮಂಡಳಿ'ಜಾರಿಗೊಳಿಸುತ್ತಿರುವ ಪ್ರಪ್ರಥಮ ರಾಜ್ಯ ಕೇರಳ ವಾಗಿ ಗುರುತಿಸಲ್ಪಡಲಿದೆ. ಈ ಮೂಲಕ ರಾಜ್ಯದ ಹಾಲು ಉತ್ಪಾದಕರು ಶೀಘ್ರ ಸ್ವಾವಲಂಬಿಗಳಾಗಲಿದ್ದಾರೆ. ಈಗಾಗಲೇ ರಾಜ್ಯಕ್ಕೆ ಅಗತ್ಯವಿರುವ ಶೇ.90ರಷ್ಟು ಹಾಲು ಕೇರಳದಲ್ಲೇ ಉತ್ಪಾದನೆಯಾಗುತ್ತಿದೆ. ಕಾಸರಗೋಡು ಜಿಲ್ಲೆಯೊಂದರಿಂದ 141 ಹಾಲು ಉತ್ಪಾದಕರ ಸಂಘಗಳ ಮೂಲಕ 70 ಸಾವಿರ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಮಿಲ್ಮಾದ ವಸತಿ ಯೋಜನೆಯ ಅಂಗವಾಗಿ 5 ಲಕ್ಷ ರೂ. ಮೊತ್ತವನ್ನು ಬಂಗಳಂ ಹಾಲು ಉತ್ಪಾದಕರ ಸಂಘದ ಸದಸ್ಯೆ ಕಮಲಾಕ್ಷಿ ಅವರಿಗೆ ಸಚಿವ ಚಂದ್ರಶೇಖರನ್ ಹಸ್ತಾಂತರಿಸಿದರು. ಶಾಸಕ ಕೆ.ಕುಞÂರಾಮನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಪಾಲುಬಂಡವಾಳ ಅರ್ಹತಾಪತ್ರ ಮತ್ತು ಲಾಭಾಂಶ ವಿತರಿಸಿದರು. ಅಜಾನೂರು ಗ್ರಾಮಪಂಚಾಯಿತಿ ಅಧ್ಯಕ್ಷ ಪಿ.ದಾಮೋದರನ್ ಹಾಲು ಉತ್ಪಾದಕರಿಗೆ ಬೆಂಬಲ ಬೆಲೆ ವಿತರಿಸಿದರು. ಕಾಸರಗೋಡು ಹಾಲು ಉತ್ಪಾದಕರ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಷಾಂಟಿ ಅಬ್ರಾಹಂ ಹಾಲು ಉತ್ಪಾದಕರ ಸಂಘಗಳಿಗೆ ನೀಡುವ ಐ.ಎಸ್.ಒ. ಪ್ರಮಾಣಪತ್ರ ವಿತರಿಸಿದರು. ಮಲಬಾರ್‍ಮಿಲ್ಮಾ ಆಡಳಿತ ನಿರ್ದೇಶಕ ಕೆ.ಎಂ.ವಿಜಯಕುಮಾರ್ ರಿವಾಲ್ವಿಂಗ್ ನಿಧಿ ವಿತರಿಸಿದರು. ಅತ್ಯುತ್ತಮ ಸಾಧನೆ ನಡೆಸಿದ ಹಾಲು ಉತ್ಪಾದಕರಿಗೆ ಬಹುಮಾನವಿತರಿಸಲಾಯಿತು.
ಕಾಞಂಗಾಡ್ ಬ್ಲೋಕ್ ಪಂಚಾಯಿತಿ ಸದಸ್ಯೆ ಪಿ.ಓಮನಾ, ಕಾಞಂಗಾಡ್ ನಗರಸಭೆ ಸದಸ್ಯರಾದಎಚ್.ಆರ್.ಶ್ರೀಧರನ್, ಗಂಗಾ ರಾಧಾಕೃಷ್ಣನ್, ಅಜಾನೂರು ಗ್ರಾಮಪಂಚಾಯತ್ ಸದಸ್ಯ ಪಿ.ಪದ್ಮನಾಭನ್, ನ್ಯಾಯವಾದಿಗಳಾದ ಗೋವಿಂದನ್ ಪಳ್ಳಿಕ್ಕಾಪಿಲ್, ಕೆ.ಶ್ರೀಕಾಂತ್, ಎ.ವಿ.ರಾಧಾಕೃಷ್ಣನ್, ಐ.ಎಸ್.ಅನಿಲ್ ಕುಮಾರ್, ಡಾ.ವಿ.ಪಿ.ಪಿ.ಮುಸ್ತಫಾ, ಪಿ.ಜಿ.ದೇವ್, ವಿ.ಕುಮಾರ್, ಪಿ.ಆರ್.ಬಾಲಕೃಷ್ಣನ್, ಜೆಸಿ ಟೋಂ ಮೊದಲಾದವರು ಉಪಸ್ಥಿತರಿದ್ದರು.ಆಡಳಿತೆ ಸಮಿತಿ ಸದಸ್ಯ ಕೆ.ಎಸ್.ಮಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.