ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ನಡೆಯುತ್ತಿರುವ ಗೋಮಾತಾ ಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವದ ಐದನೆಯ ದಿನವಾದ ಸೋಮವಾರ ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲAಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ ಹಾಗೂ ದೀಪೋತ್ಸವ ಗಳನ್ನು ನಡೆಸುವ ಮೂಲಕ ಸಂಪನ್ನಗೊAಡಿತು.
ವಿಶೇಷವಾಗಿ ಆಶ್ಲೇಷಾಬಲಿ ಹಾಗೂ ದುರ್ಗಾಪೂಜೆ ಯನ್ನು ನೆರವೇರಿಸಲಾಯಿತು. ಶ್ರೀ ಉಳ್ಳಾಲ್ತಿ ಭಜನಾ ಸಂಘ ಮೈರೆ-ಕೇಪು ತಂಡದವರು ಭಜನಾ ಸೇವೆ ಹಾಗೂ ನೃತ್ಯಭಜನೆ ನಡೆಸಿಕೊಟ್ಟರು. ಕುಮಾರಿ ವಿಧಾತ್ರೀ ಕೂಟೇಲು ಸಂಗೀತಸೇವೆ ನಡೆಸಿದರು. ಈ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥೆಯ ಮುಂಬೈ ಶಾಖೆಯ ಕಮಲಲೋಚನದಾಸ ಸ್ವಾಮೀಜಿಯವರು ಗೋಶಾಲೆಗೆ ಆಗಮಿಸಿ ಗೋಪೂಜೆ ನಡೆಸಿ ಗೋಶಾಲೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.