ಲಖನೌ: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಮೂಲ ನಿವೇಶನ ವಿವಾದ ಪ್ರಕರಣಕ್ಕೆ ಸಂಬAಧಿಸಿದAತೆ ಸುಪ್ರೀಂಕೋರ್ಟ್ ತೀರ್ಪು ಸದ್ಯವೇ ಬರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಉತ್ತರಪ್ರದೇಶ ಸರ್ಕಾರ ಮುಂದಾಗಿದೆ .
ಜನರು ವಾಟ್ಸಪ್, ಟ್ವೀಟರ್, ಟೆಲಿಗ್ರಾಮ್ ಹಾಗೂ ಇನ್ಸ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತೆರನಾದ ಮಾನಹಾನಿಯಾಗುವಂತಹ, ಧಕ್ಕೆ ತರುವಂತಹ ವಿಷಯಗಳನ್ನು ಹಂಚಿಕೊಳ್ಳದAತೆ ನಿರ್ಬಂಧ ವಿಧಿಸಿ ಉತ್ತರಪ್ರದೇಶ ಸರ್ಕಾರ ನಾಲ್ಕುಪುಟಗಳ ನಿರ್ದೇಶನ ನೀಡಿದೆ ಎಂದೂ ವರದಿಯಾಗಿದೆ.
ಸುಮಾರು ಎರಡು ತಿಂಗಳ ಕಾಲ ಈ ನಿರ್ಬಂಧ ಅಯೋಧ್ಯೆಯಲ್ಲಿ ಮುಂದುವರಿಯಲಿದ್ದು, ಈ ಸಮಯದಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಡೆಯಲಿರುವ ಯಾವುದೇ ಚರ್ಚೆಯನ್ನು ನಡೆಸದಂತೆ ನಿರ್ಬಂಧ ಹೇರಿದೆ.