ಕಾಸರಗೋಡು: ಜಿಲ್ಲೆಯಲ್ಲಿ ಮುಚ್ಚುಗಡೆ ನಡೆಸದೇ ಇರುವ ಕೊಳವೆ ಬಾವಿಗಳ ಕುರಿತು ತುರ್ತು ಮಾಹಿತಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಸಾರ್ವಜನಿಕರು ೭೩೦೬೪೪೧೧೬೮ ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಮಾಹಿತಿ, ಫೋಟೋ, ಲೊಕೇಷನ್ ಇತ್ಯಾದಿ ಸಲ್ಲಿಬೇಕು ಎಂದವರು ಸೂಚನೆ ನೀಡಿರುವರು. ರಾಜ್ಯದಲ್ಲೇ ಅತ್ಯಧಿಕ ಕೊಳವೆಬಾವಿಗಳಿರುವ ಜಿಲ್ಲೆ ಕಾಸರಗೋಡು ಆಗಿದ್ದು, ಇವುಗಳಲ್ಲಿ ಬಳಕೆಯಲ್ಲಿ ಇಲ್ಲದ, ಮುಚ್ಚುಗಡೆ ನಡೆಸದೇ ಇರುವ ಕೊಳವೆ ಬಾವಿಗಳ ಕುರಿತು ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಆಗ್ರಹಿಸಿರುವರು.