ಕಾಸರಗೋಡು: ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ವ್ಯಾಪ್ತಿಯಲ್ಲಿ ಕೇಂದ್ರ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ಕುಟುಂಬಶ್ರೀ ಮುಖಾಂತರ ಜಾರಿಗೊಳಿಸುವ ಉಚಿತ ಬ್ಯೂಟೀಷಿಯನ್ ತರಬೇತಿಗೆ ಅರ್ಜಿ ಕೋರಲಾಗಿದೆ. ತಳಿಪ್ಪರಂಬದಲ್ಲಿ ಚಟುವಟಿಕೆ ನಡೆಸುತ್ತಿರುವ ಸೌಂದರ್ಯ ರೂರಲ್ ಆಂಡ್ ಅರ್ಬನ್ ಅಸೋಸಿಯೇಶನ್ ನಲ್ಲಿ ೪ ತಿಂಗಳ ಅವಧಿಯ ಈ ತರಬೇತಿ ನಡೆಯಲಿದೆ. ಕ್ರೈಸ್ತ, ಮುಸಲ್ಮಾನ, ಪರಿಶಿಷ್ಟ ಜಾತಿ-ಪಂಗಡದ ೧೮ರಿಂದ ೩೫ ವರ್ಷ ಪ್ರಾಯದ ಯುವಕರು, ಯುವತಿಯರು ಅರ್ಜಿ ಸಲ್ಲಿಸಬಹುದು. ಯೋಜನೆಯ ಸದಸ್ಯರಾಗುವವರಿಗೆ ನೌಕರಿ ಖಚಿತತೆಯ ಜೊತೆಗೆ, ಉಚಿತ ತರಬೇತಿ, ಸಮವಸ್ತ್ರ, ವಸತಿ, ಭೋಜನ, ಇತರ ಕಲಿಕಾ ಸಾಮಾಗ್ರಿಗಳು ಇತ್ಯಾದಿ ಉಚಿತವಾಗಿ ಲಭಿಸಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: ೯೪೪೭೯೯೭೨೧೪, ೬೨೩೮೭೦೨೭೪೭ ಸಂಪರ್ಕಿಸಬಹುದಾಗಿದೆ.
ಅರ್ಜಿ ಕೋರಿಕೆ
ಉಚಿತ ಫ್ಯಾಷನ್ ಡಿಸೈನಿಂಗ್ ತರಬೇತಿ ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಉಚಿತ ರೂಪದಲ್ಲಿ ನಡೆಯಲಿದ್ದು, ಅರ್ಜಿ ಕೋರಲಾಗಿದೆ. ೨೦ರಿಂದ ೪೫ ವರ್ಷ ಪ್ರಾಯದ ಸ್ವಂತ ಉದ್ದಿಮೆ ಆರಂಭಿಸುವ ಉದ್ದೇಶದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ತರಬೇತಿ, ಭೋಜನ ಉಚಿತವಾಗಿರುವುದು. ಬಿ.ಪಿ.ಎಲ್. ಪಟ್ಟಿಯಲ್ಲಿ ಸೇರಿರುವವರಿಗೆ ಆದ್ಯತೆಯಿದೆ. ಮಹಿತಿಗೆ ದೂರವಾಣಿ ಸಂಖ್ಯೆ: ೦೪೬೭೨೨೬೮೨೪೦ ಸಂಪರ್ಕಿಸಬಹುದು.