HEALTH TIPS

ಸವಾಕ್-ಕಾಞÂಂಗಾಡ್ ಬ್ಲಾಕ್ ಸಮಾವೇಶ


      ಕಾಸರಗೋಡು:  ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಆಫ್ ಕೇರಳ(ಸವಾಕ್)ಇದರ ಕಾಞÂಂಗಾಡ್ ಬ್ಲಾಕ್ ಸಮಾವೇಶ ಹಾಗೂ ಕಲಾ ಸಂಗಮವು ಭಾನುವಾರ ಅಪರಾಹ್ನ ಕೋಟಿಕುಳಂ ಪಾಲಕುನ್ನು ಕೆವಿವಿಇಎಸ್ ಸಭಾಂಗಣದಲ್ಲಿ ವೈವಿಧ್ಯಮಯವಾಗಿ ನಡೆಯಿತು.
    ಸಮಾರಂಭವನ್ನು ಸವಾಕ್ ಜಿಲ್ಲಾಧ್ಯಕ್ಷ, ಕೇರಳ ತುಳು ಅಕಾಡೆಮಿ ಅಧ್ಯಕ್ಷರೂ ಆದ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ವಿವಿಧ ಕಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಾವಿರಾರು ಮಂದಿ ಕಲಾವಿದರ ಸಂಘಟನಾತ್ಮಕ ಬಲವರ್ಧನೆಯ ಮೂಲಕ ನ್ಯಾಯಯುತ ಬೇಡಿಕೆಗಳನ್ನು ಪೂರೈಸುವಲ್ಲಿ ಸವಾಕ್ ಯಶಸ್ವಿಯಾಗಿದೆ. ಸಾಮಾಜಿಕ ನೆಮ್ಮದಿಗಾಗಿ ತುಡಿಯುವ ಕಲಾವಿದರು ತಮ್ಮ ವೈಯುಕ್ತಿಕ ಭದ್ರತೆ, ಆಶೋತ್ತರಗಳಿಗೆ ಹಾತೊರೆದವರಲ್ಲ. ಇದರಿಂದ ವ್ಯಾಪಕ ಸಂಕಷ್ಟಕ್ಕೊಳಗಾಗುವವರಿಗಾಗಿ ಸವಾಕ್ ಸದಾ ಕಾರ್ಯತತ್ಪರವಾಗಿರುತ್ತದೆ ಎಂದು ತಿಳಿಸಿದರು.
     ಸವಾಕ್ ಕಾಞÂಂಗಾಡ್ ಬ್ಲಾಕ್ ಸಮಿತಿ ಅಧ್ಯಕ್ಷ ಮುರಳಿ ಮಾರಾರ್ ಪನತ್ತಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟಿನ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕೋಟಿಕುಳಂ ಸಮಿತಿ ಕಾರ್ಯದರ್ಶಿ ಮುರಳಿ ಪಳ್ಳಂ, ಚಂದ್ರಶೇಖರ ಮಡಿಕೈ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ಖ್ಯಾತ ಪೂರಕ್ಕಳಿ ಕಲಾವಿದ ಕೋರನ್ ಪಣಿಕ್ಕರ್, ತಿಡಂಬು ನೃತ್ಯ ಕಲಾವಿದ ಡಾ.ಶ್ರೀರಾಮ ಅಗ್ಗಿತ್ತಾಯ, ನೃತ್ಯ ಕಲಾವಿದೆ ಅಶಿತಾ ಉಪೇಂದ್ರ ಅವರನ್ನು ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಗೌರವಿಸಿ ಸನ್ಮಾನಿಸಿದರು. ಸಂಗೀತ ವಿದ್ಯಾರ್ಥಿ ಹರಿತಾ ರಘುನಾಥ್ ಅವರನ್ನು ಕಾರ್ಯದರ್ಶಿ ಸನ್ನಿ ಅಗಸ್ಟಿನ್ ಗೌರವಿಸಿದರು. ಬ್ಲಾಕ್ ಕಾರ್ಯದರ್ಶಿ ಸುರೇಶ್ ಬೇಕಲ್ ಸ್ವಾಗತಿಸಿ, ರಾಜೇಂದ್ರನ್ ಮಡಿಯನ್ ವಂದಿಸಿದರು. ಬಳಿಕ ನಡೆದ ವೈವಿಧ್ಯಮಯ ಕಲಾ ಪ್ರದರ್ಶನಗಳಲ್ಲಿ ಭರತನಾಟ್ಯ, ತಿರುವಾದಿರ ನೃತ್ಯ, ಕೋಲಾಟ, ಸಿನಿ ನೃತ್ಯ, ಸಂಗೀತ ಆಲಾಪನೆ ಮೊದಲಾದವುಗಳ ಪ್ರದರ್ಶನ ಜನ ಮನ್ನಣೆ ಪಡೆಯಿತು. ಇದೇ ಸಂದರ್ಭ ಸವಾಕ್ ಬ್ಲಾಕ್ ಸಮಿತಿಯ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸುರೇಶ್ ಬೇಕಲ್, ಕಾರ್ಯದರ್ಶಿಯಾಗಿ ಮುರಳೀ ಮಾರಾರ್,ಉಪಾಧ್ಯಕ್ಷರಾಗಿ ಜ್ಯೋತಿಲಕ್ಷಿö್ಮÃ ಉಪೇಂದ್ರನ್, ರಾಜೇಂದ್ರನ್ ಮಡಿಯಾನ್, ಖಜಾಂಜಿಯಾಗಿ ಚಂದ್ರಶೇಖರ ಮಡಿಕೈ, ಸದಸ್ಯರಾಗಿ ಬಾಲರಾಜ್ ಬೇಕಲ್ ಅವರನ್ನು ಆಯ್ಕೆಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries