ಮುಳ್ಳೇರಿಯ: ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿಯ ಹೈಸ್ಕೂಲ್ ವಿಭಾಗದಲ್ಲಿ ಗಣಿತ ಅಧ್ಯಾಪಕರಾಗಿ ನೇಮಕಗೊಂಡ ಕನ್ನಡೇತರ ಅಧ್ಯಾಪಕ ಕನ್ನಡಿಗರ ಹೋರಾಟಕ್ಕೆ ಮಣಿದು ಸ್ವಯಂ ರಜೆ ತೆಗೆದು ತೆರಳಿದ್ದಾರೆ.
ಶಾಲೆಯಲ್ಲಿ ಮುಖ್ಯಶಿಕ್ಷಕರ ಮತ್ತು ಕನ್ನಡ ಅಧ್ಯಾಪಕರ ಸಮ್ಮುಖದಲ್ಲಿ ಗಣಿತ ಪಠ್ಯವನ್ನು ಕನ್ನಡದಲ್ಲಿ ಬೋಧಿಸುವುದರೊಂದಿಗೆ ಅವರಿಗೆ ಕನ್ನಡದ ಅರ್ಹತೆಯನ್ನು ಪರಿಶೀಲಿಸಲು ತೀರ್ಮಾನಿಸಿದರೂ, ಆ ಅಧ್ಯಾಪಕ ತರಗತಿ ನಡೆಸಲು ನಿರಾಕರಿಸಿದ್ದರು. ಇದರಿಂದ ಆ ಅಧ್ಯಾಪಕನಿಗೆ ಕನ್ನಡ ಭಾಷಾ ಜ್ಞಾನವಿಲ್ಲ ಎಂಬುದಾಗಿ ಸಾಬೀತಾಗಿತ್ತು. ಇದರಿಂದ ಸ್ವಯಂ ರಜೆ ತೆಗೆದು ತೆರಳಿದ್ದಾರೆ.
ಇದರ ವಿರುದ್ಧ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಹೊಸದುರ್ಗ ಕನ್ನಡ ಸಂಘ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ರಕ್ಷಕರು, ಕನ್ನಡ ಭಾಷಾಭಿಮಾನಿಗಳು ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಇವರಿಗೆ ಕನ್ನಡ ಹೋರಾಟ ಸಮಿತಿ ಅಭಿನಂದನೆಯನ್ನು ಸಲ್ಲಿಸುವುದರೊಂದಿಗೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಲಾಗುವುದು ಎಂದು ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಮತ್ತು ಪ್ರಧಾನ ಕರ‍್ಯದರ್ಶಿ ಭಾಸ್ಕರ ಕಾಸರಗೋಡು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಶೀಂದ್ರನ್, ನಗರಸಭಾ ಕೌನ್ಸಿಲರ್ ಸುಕನ್ಯಾ, ಕನ್ನಡಿಗರಾದ ಶ್ರೀಧರ್ ಎಚ್.ಆರ್., ಹೊಸದುರ್ಗ ಕನ್ನಡ ಸಂಘದ ಎಚ್.ಎಸ್.ಭಟ್, ಬಾಲಕೃಷ್ಣ, ಜಗದೀಶ್, ಬಿ.ಡಿ.ಭಟ್, ಗಂಗಾಧರ್, ಕೆ.ಎಂ.ಖಾಲೀದ್, ಲಕ್ಷ÷್ಮಣ, ರಾಶೀಯಾ, ಜ್ಯೋತಿ, ಆಶಾ, ವನಿತಾ, ಸವಿತಾ, ಅನಸೂಯ ಮತ್ತಿತರರು ಭಾಗವಹಿಸಿದರು.