ಕಾಸರಗೊಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ "ಮಕ್ಕಳು ಮತ್ತು ಕಾನೂನು ಸಂರಕ್ಷಣೆ" ಎಂಬ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು(ನ.೭) ಮಧ್ಯಾಹ್ನ ೨ ಗಂಟೆಗೆ ನಡೆಯಲಿದೆ.
ವಿದ್ಯಾನಗರ ಚಿನ್ಮಯಾ ವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಡಿ.ಎನ್.ಎಸ್. ಎ.ಅಧ್ಯಕ್ಷ ರೂ ಆಗಿರುವ ಜಿಲ್ಲಾ ನ್ಯಾಯಮೂರ್ತಿ ಡಿ.ಅಜಿತ್ ಕುಮಾರ್ ಉದ್ಗಾಟಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು. ಪ್ರಧಾನ ಜ್ಯುಡೀಶಿಯಲ್ ಮೆಜಿಸ್ಟ್ರೇಟ್, ಡಿ.ಎನ್.ಎಸ್.ಎ.ಯ ಪ್ರಭಾರ ಕಾರ್ಯದರ್ಶಿಯೂ ಆಗಿರುವ ಮುಜೀಬ್ ರಹಮಾನ್ ಉಪನ್ಯಾಸ ನಡೆಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಮುಖ್ಯ ಅತಿಥಿಯಾಗಿರುವರು. ನಂತರ ಮಕ್ಕಳೊಂದಿಗೆ ಸಂವಾದ ನಡೆಯಲಿದೆ.