ಕಾಸರಗೋಡು: ಜಗತ್ತಿನಲ್ಲಿ ಯಾರೂ ಅಪರಾಧಿಗಳಾಗಿ ಜನಿಸುವುದಿಲ್ಲ. ಬದುಕಿನ ಸ್ಥಿತ್ಯಂತರಗಳು ಅವರನ್ನು ಅಪರಾಧಿಯನ್ನಾಗಿಸುತ್ತದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಮೂರ್ತಿ ಡಿ.ಅಜಿತ್ ಕುಮಾರ್ ಅಭಿಪ್ರಾಯಪಟ್ಟರು.
ವಿ.ಆರ್.ಕೃಷ್ಣ ಅಯ್ಯರ್ ಸ್ಮರಣಾರ್ಥ ಜಿಲ್ಲಾ ಪೆÇ್ರಬೇಷನ್ ಕಚೇರಿ ವತಿಯಿಂದ ನಡೆಸಲಾಗುತ್ತಿರುವ ಸಾಮಾಜಿಕ ನಿಯಂತ್ರಣ ಸಪ್ತಾಹ ಮತ್ತು ಜಿಲ್ಲಾ ಮಟ್ಟದ ವಿಚಾರಸಂಕಿರಣವನ್ನು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಉದ್ಘಾಟಿಸಿದರು.
ಯಾವುದೋ ಒಂದು ಕೃತ್ಯದಲ್ಲಿ ಅಪರಧಿಯಾಗಿದ್ದ ಎಂಬ ಕಾರಣಕ್ಕೆ ಅಂಥವರನ್ನು ಸಮಾಜದ ಪ್ರಧಾನವಾಹಿನಿಯಿಂದ ಬೇರ್ಪಡಿಸಕೂಡದು. ಅವರಿಗೂ ಉಳಿದವರಂತೆ ತಮ್ಮದೇ ಆದ ಹಕ್ಕುಗಳಿವೆ. ಅವರನ್ನು ಅಪರಾಧ ನಡೆಸುವಂತೆ ಪ್ರೇರೇಪಿಸಿದ ಸಾಮಾಜಿಕ, ಅವರ ಮಾನಸಿಕ ಸ್ಥಿತಿಗತಿಗಳನ್ನು ಬದಲಿಸುವ ಯತ್ನವನ್ನು ಉಳಿದವರು ನಡೆಸಬೇಕು ಎಂದವರು ಆಗ್ರಹಿಸಿದರು.
ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ಬಿ.ಭಾಸ್ಕರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ಕಾರಿ ಪ್ಲೀಡರ್ ಪಿ.ವಿ.ಜಯರಾಜನ್, ಆಧುನಿಕ ಯುಗದ ಶಿಕ್ಷೆಯ ಕ್ರಮ ಮತ್ತು ಸಾಮಾಜಿಕ ನಿಯಂತ್ರಣ ವ್ಯವಸ್ಥೆಗಳು" ಎಂಬ ವಿಷಯದಲ್ಲಿ ಜಿಲ್ಲಾ ಕಾನೂನು ಸಹಾಯ ಪ್ರಾಧಿಕಾರ ವಿಭಾಗ ಅಧಿಕಾರಿ ಕೆ.ದಿನೇಶ ಮಾತನಾಡಿದರು. ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ಕಾಸರಗೋಡು ವಿಶೇಷ ಸಬ್ ಜೈಲ್ ವರಿಷ್ಠಾಧಿಕಾರಿ ಎನ್.ಗಿರೀಶ್ ಕುಮಾರ್, ಚೀಮೇನಿ ಮುಕ್ತ ಜೈಲ್ ಕಲ್ಯಾಣ ಅಧಿಕಾರಿ ಕೆ.ಶಿವಪ್ರಸಾದ್ ಉಪಸ್ಥಿತರಿದ್ದರು. ನಂತರ ವಿ.ಆರ್.ಕೃಷ್ಣ ಅಯ್ಯರ್ ಅವರ ಬದುಕಿನ ಸಾಕ್ಷ್ಯಚಿತ್ರ "ಲೈಫ್ ಆಫ್ ಸಾಗಾ" ದ ಪ್ರದರ್ಶನ ನಡೆಯಿತು. ಕೆ.ದಿಲಿಫ್ ಸ್ವಾಗತಿಸಿದರು. ಪೆÇ್ರಬೇಷನ್ ಸಹಾಯಕ ಬಿ.ಸಲಾವುದ್ದೀನ್ ವಂದಿಸಿದರು.