ಕುಂಬಳೆ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಧರ್ಮತ್ತಡ್ಕ ಶ್ರೀದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎ ಶ್ರೇಣಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಏಕಪಾತ್ರ ಅಭಿನಯದಲ್ಲಿ ಮನೀಶ್ ಎಸ್. ಡಿ., ಕನ್ನಡ ಭಾಷಣ, ಹಿಂದಿ ಭಾಷಣ ಹಾಗೂ ಸಂಸ್ಕೃತ ಅಷ್ಟಪದಿ ಸ್ಪರ್ಧೆಗಳಲ್ಲಿ ವಿಶ್ವಜಿತ್ ಕೆ., ತಬಲಾದಲ್ಲಿ ವಿಕಾಸ್ ಕೆ. ಎಚ್., ಸಂಸ್ಕೃತ ಪಾಡಗಂನಲ್ಲಿ ಪೃಥ್ವಿಶಂಕರ್, ಸಂಸ್ಕೃತ ಅಷ್ಟಪದಿಯಲ್ಲಿ ಶಾರದಾ ಸುರಭಿ, ಕವಿತಾ ರಚನೆ ಹಾಗೂ ಸಂಸ್ಕೃತ ಸಮಸ್ಯಾ ಪೂರಣಂನಲ್ಲಿ ಸಿಂಜಿತಾ, ಲಲಿತಗಾನದಲ್ಲಿ ಚೈತ್ರಿಕಾ, ಮೋಹಿನಿಯಾಟಂನಲ್ಲಿ ಸ್ಫೂರ್ತಿಲಕ್ಷಿö್ಮÃ, ಪಾಡಗಂ ಹೆಣ್ಮಕ್ಕಳ ವಿಭಾಗದಲ್ಲಿ ವಿದ್ಯಾಶ್ರೀ, ಕಥಾರಚನೆ ಮತ್ತು ಸಂಸ್ಕೃತ ಪ್ರಶ್ನೋತ್ತರಿಯಲ್ಲಿ ವರ್ಷಾ ಆಳ್ವ ಎಗ್ರೇಡ್ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್, ಶಾಲಾ ಸಂಚಾಲಕ ಎನ್. ಶಂಕರನಾರಾಯಣ ಭಟ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.