ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶಿವಶಕ್ತಿ ಪೆರಡಾಲ ತಂಡವು ಅನೇಕ ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಡಿ. ೧೬ರಂದು ಶ್ರೀ ಕ್ಷೇತ್ರದ ಜಾತ್ರಾಮಹೋತ್ಸವವು ಜರಗಲಿರುವುದು. ಈ ಸಂದರ್ಭದಲ್ಲಿ ಪ್ರಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ನಿಶಿತಾ ಪುತ್ತೂರು ಮತ್ತು ಬಳಗದವರಿಂದ ರಾತ್ರಿ ೯ ಗಂಟೆಯಿAದ ಭರತನಾಟ್ಯ ಕಾರ್ಯಕ್ರಮ ನಡೆಯಲಿರುವುದು. ಜಾತ್ರಾಮಹೋತ್ಸವದ ದಾರಿದೀಪದ ವ್ಯವಸ್ಥೆಯ ಪ್ರಾಯೋಜಕತ್ವವನ್ನು ಶಿವಶಕ್ತಿ ತಂಡವು ನಿರ್ವಹಿಸಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಅದೃಷ್ಟಚೀಟಿಯನ್ನು ಶ್ರೀ ದೇವರ ಸನ್ನಿಧಿಯಲ್ಲಿ ಅರ್ಚಕ ಬಾಲಸುಬ್ರಹ್ಮಣ್ಯ ಭಟ್ ಗುರುವಾರ ಬಿಡುಗಡೆಗೊಳಿಸಿದರು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ಊರಿನ ಗ್ರಾಮದೇವಸ್ಥಾನವಾಗಿದೆ. ದಿನನಿತ್ಯ ಅನೇಕ ಮಂದಿ ಭಕ್ತಾದಿಗಳು ಶ್ರೀ ದೇವರ ದರ್ಶನಗೈದು ಪುನೀತರಾಗುವ ಈ ಕ್ಷೇತ್ರವು ಕಾರಣಿಕ ಪ್ರಸಿದ್ಧವಾಗಿದೆ. ಶ್ರೀ ಕ್ಷೇತ್ರದ ಭಕ್ತಾದಿಗಳು ಹಾಗೂ ಶಿವಶಕ್ತಿ ತಂಡದ ಸದಸ್ಯರು ಆಮಂತ್ರಣ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಿ.೧೬ರಂದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ- ಶಿವಶಕ್ತಿ ಪ್ರಾಯೋಜಕತ್ವದಲ್ಲಿ ಭರತನಾಟ್ಯ ಕಾರ್ಯಕ್ರಮ
0
ನವೆಂಬರ್ 08, 2019