ಪೆರ್ಲ:ಪೆರ್ಲದ ಯಕ್ಷಮಿತ್ರರು ಪಡ್ರೆ ಶನಿವಾರ ಪೆರ್ಲ ಶ್ರೀ ಭಾರತೀ ಸದನದಲ್ಲಿ ಆಯೋಜಿಸಿದ 'ಪಡ್ರೆ ಯಕ್ಷೋತ್ಸವ ೨೦೧೯' ೧೪ನೇ ವರ್ಷದ ಸನ್ಮಾನ ಸಮಾರಂಭದಲ್ಲಿ ಯಕ್ಷರಂಗದಲ್ಲಿ ತನ್ನದೇ ಶೈಲಿಯ ಛಾಪನ್ನೊತ್ತಿ, ಹಲವು ಪ್ರಸಿದ್ಧ ಮೇಳಗಳಲ್ಲಿ ದಿಟ್ಟ ಹೆಜ್ಜೆಗಾರಿಕೆ ಹಾಗೂ ವಾಕ್ಚಾತುರ್ಯದಿಂದ ೪೦ ಸಂವತ್ಸರಗಳಿAದ ಅನವರತ ಕಲಾಸೇವೆ ನಡೆಸುವ ಮೂಲಕ ಯಕ್ಷಗಾನ ಪ್ರೇಮಿಗಳನ್ನು ಯಕ್ಷರಸಲೋಕದಲ್ಲಿ ವಿಹರಿಸುವಂತೆ ಮಾಡಿದ 'ರಂಗದ ರಾಜ' ಖ್ಯಾತಿಯ ರಾಧಾಕೃಷ್ಣ ನಾವಡ ಮಧೂರು ಅವರಿಗೆ ಪಡ್ರೆ ಯಕ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹವ್ಯಾಸಿ ಯಕ್ಷಗಾನ ಕಲಾವಿದ ಪುಷ್ಪರಾಜ್ ಕುಕ್ಕಾಜೆ ಅಭಿನಂದನಾ ಭಾಷಣ ಮಾಡಿದರು.
ವೇ.ಮೂ.ಗೋಪಾಲಕೃಷ್ಣ ಅಡಿಗ, ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಜೇಂದ್ರ ಬಿ., ಮಂಗಳೂರು ಆಕಾಶವಾಣಿಯ ಸೂರ್ಯನಾರಾಯಣ ಭಟ್, ಡಾ.ವಿಷ್ಣು ಪ್ರಸಾದ್ ಬರೆಕೆರೆ, ಅವಿನಾಶ್ ಶಾಸ್ತಿç ಕೊಲ್ಲೆಂಕಾನ, ಶ್ರೀಧರ ಪಡ್ರೆ ಉಪಸ್ಥಿತರಿದ್ದರು.