ಬದಿಯಡ್ಕ: ಮೂರುದಿನಗಳ ಕಾಲ ಬದಿಯಡ್ಕ ಬೋಳುಕಟ್ಟೆ ಪಂಚಾಯಿತಿ ಕ್ರೀಡಾಂಗಣದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ ಬುಧವಾರ ಕೊನೆಗೊಂಡಿದ್ದು, ಕುಂಬಳೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯು ಸಮಗ್ರ ಚಾಂಪಿಯನ್‌ಶಿಪ್ ಗಳಿಸಿದೆ. ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಕಾರಡ್ಕ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ. ಪೆರಡಾಲ ಸರ್ಕಾರಿ ಪ್ರೌಢಶಾಲೆಯ ಅತಿಥೇಯತ್ವದಲ್ಲಿ ಜರಗಿದ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ ಉದ್ಘಾಟಿಸಿದರು. ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ವಿಜೇತರಿಗೆ ಟ್ರೋಫಿಗಳನ್ನು ವಿತರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಡುವನ್ ಕುಂಞÂ, ಉಪಾಧ್ಯಕ್ಷ ರಾಮ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ನಿರ್ಮಲಾ ಟೀಚರ್ ಉಪಸ್ಥಿತರಿದ್ದರು. ಸಂಚಾಲಕ ನಿರ್ಮಲ್ ಕುಮಾರ್ ಸ್ವಾಗತಿಸಿ, ಪ್ರಮೋದ್ ಕುಮಾರ್ ವಂದಿಸಿದರು.
ಕಿರಿಯ ಪ್ರಾಥಮಿಕ ಮಿನಿ ಹಾಗೂ ಕಿಡ್ಡೀಸ್ ವಿಭಾಗದಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಂಟಾರು ಸಮಗ್ರ ಪ್ರಶಸ್ತಿಯನ್ನು ಗಳಿಸಿದರೆ, ಹಿರಿಯ ಪ್ರಾಥಮಿಕ ಕಿಡ್ಡೀಸ್ ವಿಭಾಗದಲ್ಲಿ ಕುಂಬಳೆಯ ಹೋಲಿ ಫ್ಯಾಮಿಲಿ ಶಾಲೆ, ಸಬ್ ಜೂನಿಯರ್ ವಿಭಾಗದಲ್ಲಿ ಜಿ.ವಿ.ಎಚ್.ಎಸ್.ಎಸ್.ಕಾರಡ್ಕ, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಜಿ.ಎಚ್.ಎಸ್.ಎಸ್.ಕುಂಬಳೆ ಸಮಗ್ರ ಪ್ರಶಸ್ತಿ ಗಳಿಸಿದೆ.