ಕಾಸರಗೋಡು: ಕೇರಳ ಇನ್ಸ್ ಸ್ಟಿ ಟ್ಯೂ ಟ್ ಆಫ್ ಲೇಬರ್ ಆಂಡ್ ಎಂಪ್ಲಾ ಯ್ಮೆ ಂಟ್ ಸಾಪ್ ಬೋರ್ಡ್ ನಲ್ಲಿ ಸದಸ್ಯರಾಗಿರುವ ಕಾರ್ಮಿಕರಿಗಾಗಿ ನಡೆಸಲಾಗುವ ರಾಜ್ಯ ಮಟ್ಟದ ಕಾರ್ಯಾಗಾರ ಜರುಗಿತು. ವಿವಿಧ ಟ್ರೇಡ್ ಗಳ ಪ್ರತಿನಿಧಿಗಳು, ವಿವಿಧ ವಲಯಗಳ ಕಾರ್ಮಿಕರು ಭಾಗವಹಿಸಿದ್ದರು.
ಕಾಸರಗೋಡು ಸ್ಪೀ ಡ್ ವೇ ಇನ್ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಬೋರ್ಡ್ ಅಧ್ಯಕ್ಷ ನ್ಯಾಯವಾದಿ ಕೆ.ಅನಂತ ಗೋಪಾಲ್ ಉದ್ಘಟಿಸಿದರು. ಕಿಲಾ ಸಂಸ್ಥೆಯ ಫೆಲ್ಲೋ ಜೆ.ಎಸ್.ಕಿರಣ್ ಅಧ್ಯಕ್ಷತೆ ವಹಿಸಿದ್ದರು. ಪಿ.ಸಿ.ವಿಜಯರಾಜನ್ ಉಪನ್ಯಾಸ ನಡೆಸಿದರು. ಜಿಲ್ಲಾ ಕಾರ್ಯಕಾರಿ ಅಧಿಕಾರಿ ವಿ.ಅಬ್ದುಲ್ ಸಲಾಂ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವನ್ ಉಪಸ್ಥಿತರಿದ್ದರು.