ಮಧೂರು: ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಯೋಜನೆಯ ಅಂಗವಾಗಿ ಔಷಧ ತೋಟ ನಿರ್ಮಾಣಕ್ಕೆ ನೂರು ಔಷಧ ಸಸಿಗಳನ್ನು ನೀಡಿದ ಮತ್ತು ಈ ಬಗ್ಗೆ ಜಾಗೃತಿ ತರಗತಿ ನಡೆಸಿದ ಅತ್ತರ್ ವೈದ್ಯರ್ ಎಂಬವರನ್ನು ಪಟ್ಲ ಪಬ್ಲಿಕ್ ಗ್ರಂಥಾಲಯದಲ್ಲಿ ಗೌರವಿಸಲಾಯಿತು.
ಮಧೂರು ಗ್ರಾಮಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅಭಿನಂದನೆ ನಡೆಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಅವರು ಬಹುಮಾನ ವಿತರಿಸಿದರು. ಶಿಕ್ಷಕಿ ಪಿ.ಟಿ.ಉಷಾ ಅವರು ಶಾಲೆಗೆ ನೀಡಿದ ಪುಸ್ತಕಗಳನ್ನು ಮಧೂರು ಗ್ರಾಮಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಪಡೆದುಕೊಂಡರು. ಗ್ರಾಮ ಪಂಚಾಯತಿ ಸದಸ್ಯ ಎಂ.ಎ.ಮಜೀದ್, ಶಿಕ್ಷಕ-ರಕ್ಷಕ ಸಂಘದ ಎಚ್.ಕೆ.ಅಬ್ದುಲ್ ರಹಮಾನ್, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಸಿ.ಎಚ್.ಅಬೂಬಕ್ಕರ್, ಶಿಕ್ಷಕ ಎ.ಪವಿತ್ರನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಚಾಲಕಿ ಪಿ.ಟಿ.ಉಷಾ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಯು.ಪ್ರದೀಪ್ ಕುಮಾರ್ ವಂದಿಸಿದರು.