HEALTH TIPS

ಕೇರಳ ರಾಜ್ಯೋತ್ಸವ : ಗಡಿನಾಡಿನ ಇಬ್ಬರು ಕನ್ನಡಿಗ ಸಾಧಕರಿಗೆ ಗೌರವಾರ್ಪಣೆ

          ಕಾಸರಗೋಡು: ಕೇರಳ ರಾಜ್ಯೋತ್ಸವ ಅಂಗವಾಗಿ ನಡೆಸಲಾಗುವ ಆಡಳಿತೆ ಭಾಷಾ ಸಪ್ತಾಹ ಅಂಗವಾಗಿ ಜಿಲ್ಲಾಡಳಿತೆ ವತಿಯಿಂದ ಗಡಿನಾಡಿನ ೪ ಮಂದಿ ಸಾಧಕರಲ್ಲಿ ಇಬ್ಬರು ಕನ್ನಡಿಗರಿಗೂ ಗೌರವಾರ್ಪಣೆ ನ.೮ರಂದು ನಡೆಯಲಿದೆ.
         ಜಿಲ್ಲಾ ವಾರ್ತಾ ಇಲಾಖೆ ಕಚೇರಿ ನೇತೃತ್ವದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಮತ್ತು ಮಲೆಯಾಳ ವಿಭಾಗಗಳ ಸಹಕಾರದೊಂದಿಗೆ ಕಾಸರಗೋಡು ಸರಕಾರಿ ಕಾಲೇಜಿನ ವಿಚಾರಸಂಕಿರಣ ಸಭಾಂಗಣದಲ್ಲಿ ನಾಳೆ ಮಧ್ಯಾಹ್ನ ೨.೩೦ಕ್ಕೆ ಸಮಾರಂಭ ಜರಗುವುದು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ನಡೆಸಿರುವ ಡಾ.ಯು.ಶಂಕರನಾರಾಯಣ ಭಟ್ ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದುಷಿಃ ಶಶಿಕಲಾ ಟೀಚರ್ ಅವರಿಗೆ ಈ ಅಭಿನಂದನೆ ಸಲ್ಲಲಿದೆ. ಈ ಇಬ್ಬರು ಕನ್ನಡಿಗರು.
            ಡಾ.ಯು.ಶಂಕರನಾರಾಯಣ ಭಟ್ :
       ಕಾಸರಗೋಡು ಜಿಲ್ಲೆಯ ಉಪ್ಪಂಗಳ ಮೂಲದವರಾದ ಡಾ.ಯು.ಶಂಕರನಾರಾಯಣ ಭಟ್ ಅವರು ಶಿಕ್ಷಣ, ಕನ್ನಡ ಸಾಹಿತ್ಯ, ಸಂಗೀತ, ಯಕ್ಷಗಾನ ಸಹಿತ ಕಲಾಕ್ಷೇತ್ರದಲ್ಲಿ ಅಪಾರ ಸಾಧನೆ ನಡೆಸಿದವರು. ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಕಲ್ಲಿಕೋಟೆ ವಿಶ್ವವಿದ್ಯಾಲಯದ ಕನ್ನಡ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ, ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಂಶೋಧನೆ ಮಾರ್ಗದರ್ಶಕರಾಗಿ, ಭಾರತೀಯ ಭಾಷಾ ಅಧ್ಯಯನಾಂಗ ನಿರ್ದೇಶಕರಾಗಿ, ಕೇರಳ ಸರಕಾರದ ಉನ್ನತ ಶಿಕ್ಷಣ ಉಪನಿರ್ದೇಶಕರಾಗಿ ಅವರ ಕೊಡುಗೆ ಅನನ್ಯವಾದುದು. ಮೈಸೂರು ವಿಶ್ವವಿದ್ಯಾಲಯದಿಂದ `ಪಂಪನ ಕೃತಿಗಳ ಛಂದ ಶಿಲ್ಪ' ಎಂಬ ವಿಷಯದಲ್ಲಿ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ೧೯೯೭ರಲ್ಲಿ ಪಿ.ಹೆಚ್.ಡಿ. ಪಡೆದು, ಸ್ವರ್ಣ ಪದಕದೊಂದಿಗೆ ಮಾನ್ಯರಾದವರು. ಕಾಸರಗೋಡು ಜಿಲ್ಲೆಯ ಚರಿತ್ರೆ, ಪಂಪನ ಕೃತಿಗಳ ಛಂದ ಶಿಲ್ಪ, ಯಕ್ಷಗಾನ ಕಲೆ ಮತ್ತು ಕಲಾವಿದರು, ತೆಂಕನಾಡ ಯಕ್ಷಗಾನ, ಕಾಸರಗೋಡು ತಾಲೂಕಿನ ಶಾಲೆಗಳ ಇತಿಹಾಸ, ಕಾಸರಗೋಡಿನ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತಗಾರರು ಸಹಿತ ಅನೇಕ ಕೃತಿಗಳನ್ನು ರಚಿಸಿದ್ದಾರೆ.   
     ಉತ್ತಮ ಅರ್ಥಧಾರಿ ಮತ್ತು ವೇಷಧಾರಿಯಾಗಿರುವ ಅವರು ಈ ನಿಟ್ಟಿನಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ. ಆಕಾಶವಾಣಿಯಲ್ಲೂ ಪ್ರಸ್ತುತಿ ನೀಡಿದ್ದಾರೆ. ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾಸಂಘದ ಸಕ್ರಿಯ ಕಲಾವಿದರಾಗಿದ್ದಾರೆ. ಉತ್ತಮ ವಾಗ್ಮಿಯಾಗಿ, ಉಪನ್ಯಾಸಕರಾರಾಗಿ ಅನೇಕ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾಗಿದ್ದಾರೆ.
        ನೃತ್ಯ ವಿದುಷಿ ಶಶಿಕಲಾ ಟೀಚರ್ :
     ಕಾಸರಗೋಡು ಜಿಲ್ಲೆಯ ಅತ್ಯಂತ ಹಿರಿಯ ಶಾಸ್ತ್ರೀಯ ನೃತ್ಯ ಕಲಿಕಾ ಸಂಸ್ಥೆ ನೃತ್ಯನಿಕೇತನ ಕಾಸರಗೋಡು ಸಂಸ್ಥೆಯ ನೃತ್ಯ ಗುರು ಮತ್ತು ನಿರ್ದೇಶಕಿಯಾಗಿರುವ ಶಶಿಕಲಾ ಟೀಚರ್ ಅವರು ನೃತ್ಯ ಮತ್ತು ಸಂಗೀತ ಕಲಾ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅನನ್ಯವಾದುದು. ಸಾವಿರಾರು ಶಿಷ್ಯರು ಇವರಿಂದ ಪಳಗಿ ದೇಶ, ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಇವರ ಹಿರಿಮೆ-ಗರಿಮೆಗಳನ್ನು ವಿಸ್ತರಿಸಿದ್ದಾರೆ. ಇವರ ಅಪಾರ ಸಾಧನೆಯ ಹಿನ್ನೆಲೆಯಲ್ಲಿ `ನೃತ್ಯ ಕಲಾ ಸಿಂಧು`, `ನೃತ್ಯ ವಿಶಾರದೆ', `ನಾಟ್ಯ ಮಯೂರಿ', `ನೃತ್ಯ ಕಲಾಸಿಂಧು' ಮುಂತಾದ ಬಿರುದುಗಳು ವಿವಿಧ ಪ್ರತಿಷ್ಠಿತ ಸಂಘ-ಸAಸ್ಥೆಗಳಿAದ ನೀಡಲ್ಪಟ್ಟಿದೆ. ೧೯೯೦ನೇ ಇಸವಿಯಿಂದ ಕರ್ನಾಟಕ ಸರಕಾರದ ಪ್ರೌಢಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಪರೀಕ್ಷೆಗೆ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೭೮ರಲ್ಲಿ ಸ್ಥಾಪನೆಗೊಂಡ ನೃತ್ಯ  ನಿಕೇತನ ಸಂಸ್ಥೆ ೧೯೮೨ರಲ್ಲಿ ನೋಂದಣಿ ಹೊಂದಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಕೇರಳ ನಾಟಕ ಅಕಾಡೆಮಿಯೊಂದಿಗೆ ನೋಂದಣಿಯನ್ನೂ ಪಡೆದಿದೆ. ತಮ್ಮ ೫ನೇ ವರ್ಷ ಪ್ರಾಯದಲ್ಲಿ ಸೋದರ ಮಾವ, ನೃತ್ಯ ಗುರು ಮೋಹನ್ ರಾಘವ್ ಅವರಿಂದ ಭರತ ನಾಟ್ಯ ಮತ್ತು ಕಥಕ್ ನೃತ್ಯ ಕಲಿಕೆ ನಡೆಸಿದರು. ಬಳಿಕ ಮಂಗಳೂರಿನ ನಾಟ್ಯಾಚಾರ್ಯ ಯು.ಎಸ್.ಕೃಷ್ಣ ರಾವ್ ಅವರಿಂದ ಭರತನಾಟ್ಯ, ತಿರುವನಂತಪುರAನ ಕಲಾಮಂಡಲA ನ ಮೀರಾ ನಂಬ್ಯಾರ್ ಅವರಿಂದ ಮೋಹಿನಿಯಾಟಂ, ಕೂಚುಪುಡಿಯ ಹೆಚ್ಚುವರಿ ಪ್ರಾವೀಣ್ಯ ಪಡೆದರು. ಶಾಲಾ ಶಿಕ್ಷಣದ ಜೊತೆಗೆ ಟೈಪ್ ರೈಟಿಂಗ್, ಶಾರ್ಟ್ ಹ್ಯಾಂಡ್, ಹಿಂದಿ ರಾಷ್ಟ್ರ ಭಾಷಾ ವಿಶಾರದ್ ವಲಯಗಳಲ್ಲಿ ಪ್ರಾವೀಣ್ಯ ಪಡೆದರು. ಕೆಲ ಶಾಲೆಗಳಲ್ಲಿ ಅಲ್ಪ ಕಾಲ ಶಿಕ್ಷಕಿಯಾಗಿಯೂ ದುಡಿದಿದ್ದಾರೆ. 
        ಬದುಕಿನಲ್ಲಿ ಅಪಾರ ನೋವನ್ನು ಅನುಭವಿಸಿದ ಅವರು ಎಳವೆಯಲ್ಲೇ ಹೆತ್ತವರನ್ನು ಕಳೆದುಕೊಂಡರು. ವಿವಾಹವಾದ ಒಂದೇ ವರ್ಷದಲ್ಲಿ ಪತಿಯ ವಿಯೋಗವನ್ನೂ ಅನುಭವಿಸಿದರು. ಬದುಕಿನ ಬವಣೆಗಳನ್ನು ಸಂಗೀತ-ನೃತ್ಯ ಕ್ಷೇತ್ರಗಳಲ್ಲಿ ಸಕ್ರಿಯರಾಗುವ ಮೂಲಕ ಮರೆಯುವುದಕ್ಕೆ ಯತ್ನಿಸಿ, ಯಶಸ್ವಿಯಾದರು. ಹತ್ತಿರದ ಸಂಬAಧಿಕರಾದ ಕವಿ ದಿ.ಎಂ.ಗAಗಾಧರ ಭಟ್ ಮತ್ತು ಗಮಕ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅವರ ಸತತ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಸಾಧನೆಯಲ್ಲಿ ಪರಿಪೂರ್ಣರಾದರು.
       ಕರ್ನಾಟಕ, ಕೇರಳ, ಮಹಾರಾಷ್ಟ್ರ ಸಹಿತ ದೇಶದಾದ್ಯಂತ ತಮ್ಮ ನೃತ್ಯ ಪ್ರದರ್ಶನ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅವರು ನಡೆಸಿದ್ದ ವಿಶೇಷ ನೃತ್ಯ ಸಾಧನೆಯ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ `ಚಕ್ರತೀರ್ಥ' ದಲ್ಲಿ ಪ್ರಧಾನ ಪಾತ್ರ ವಹಿಸುವ ಅವಕಾಶ ದೊರೆತಿದ್ದರೂ, ಇವರು ವ್ಯಕ್ತಿಗತ ಕಾರಣಗಳಿಂದ ನಿರಾಕರಿಸಿದ್ದರು. ಮಡಿಕೇರಿಯ ಪುರಭವನದಲ್ಲಿ ಅವರು  ನಡೆಸಿದ ನೃತ್ಯವನ್ನು ಕಂಡು ಮೆಚ್ಚಿದ ಜನರಲ್ ಕಾರಿಯಪ್ಪನವರು ತಮ್ಮ ನಿವಾಸಕ್ಕೆ ಕರೆಸಿ ಸತ್ಕರಿಸಿದ್ದರು. ದಾವಣೆಗೆರೆಯಲ್ಲಿ ನಡೆಸಿದ ಪ್ರದರ್ಶನ ಇವರಿಗೆ ಚಿನ್ನದ ಫಲಕ ಒದಗಿಸಿದೆ.
         ಇತರ ಸಾಧಕರಿಗೂ ಅಭಿನಂದನೆ-ವಿವರ:
          ಪಿ.ಪಿ.ಕೆ.ಪೊದುವಾಳ್ : ಮಲೆಯಾಳಂ ಸಾಹಿತ್ಯದಲ್ಲಿ ಕಾಸರಗೋಡು ಜಿಲ್ಲೆಯ ನಿವಾಸಿಯಾಗಿರುವ ಪಿ.ಪಿ.ಕೆ.ಪೊದುವಾಳ್ ಬಹುಮುಖ ಪ್ರತಿಭೆಯಾಗಿದ್ದಾರೆ. ಪರಿಸರ ಸಂರಕ್ಷಣೆ ಸಹಿತ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡವರು. ಈ ನಿಟ್ಟಿನಲ್ಲಿ ಎನ್.ಸಿ.ಇ.ಆರ್.ಟಿ., ಕೇಂದ್ರ ಆರೋಗ್ಯ ಮಂತ್ರಾಲಯಗಳ ಮನ್ನಣೆಗೂ ಪಾತ್ರರಾದವರು. ವಿಜ್ಞಾನ ಕೋಶ, ವಿಜ್ಞಾನ ನಿಘಂಟು, ಜೀವವಿಜ್ಞಾನ ಕೋಶ ಇತ್ಯಾದಿಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಜಿಲ್ಲಾ ಪರಿಸರ ಸಮಿತಿ, ಎಂಡೋಸಲ್ಫಾನ್  ವಿರುದ್ಧ ಜನಪರ ಹೋರಾಟ ಸಮಿತಿ ಸಹಿತ ಸಂಘಟನೆಗಳಲ್ಲಿ ತೊಡಗಿಕೊಂಡವರು. `ಪರಿಸ್ಥಿತಿಯುಂ ಸಂಸ್ಕಾರವುA(ಪರಿಸರ ಮತ್ತು ಸಂಸ್ಕಾರ)', `ಬಿಗಿಲ್ ಯಾತ್ರ(ಬಿಗಿಲಿನ ಯಾತ್ರೆ)' ಇತ್ಯಾದಿ ಪುಸ್ತಕಗಳನ್ನು ರಚಿಸಿದ್ದಾರೆ. 
        ಅಮ್ಮಾಳು ಅಮ್ಮ : ಚಿತ್ರ ರಚನೆ ಕಲಾವಿದೆಯಾಗಿ ನಾಡಿಗೆ ಹೆಸರು ತಂದವರು ಅಮ್ಮಾಳು ಅಮ್ಮ. ಮಲೆಯಾಳಂ ನಾಟಕ ರಂಗದಲ್ಲೂ ತೊಡಗಿಕೊಂಡವರು. `ದೈವ ಮಗಳ್' ಎಂಬ ಕಿರುಚಿತ್ರದಲ್ಲೂ ಅಭಿನಯಿಸಿದ್ದಾರೆ. ಚಾಲಿಂಗಾಲ್ ಸಹಿತ ವಿವಿಧೆಡೆ ಇವರ ಚಿತ್ರಗಳ ಪ್ರದರ್ಶನಗಳು ನಡೆದಿವೆ. ಪುಲ್ಲೂರು-ಪೆರಿಯ ಗ್ರಾಮಪಂಚಾಯತ್‌ನ ಚಾಲಿಂಗಾಲ್ ಕಲ್ಲುಮಾಳ ನಿವಾಸಿ ಇವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries