HEALTH TIPS

ಅಯೋಧ್ಯೆ: ರಾಮಲಲ್ಲಾ ವಕೀಲರಿಗೆ ಸಿಜೆಐ ಗೊಗೊಯ್ ನೀಡಿದ್ದ ಅಪರೂಪದ ಆಫರ್

   
     ನವದೆಹಲಿ: ದೇಶದ ರಾಜಕೀಯ ಇತಿಹಾಸವನ್ನೇ ಬದಲಾಯಿಸಿದ್ದ ೧೩೦ ವರ್ಷಗಳ ಹಿಂದಿನ ಅಯೋಧ್ಯೆ ಜಮೀನು ವಿವಾದವನ್ನು, ಕೊನೆಗೂ, ಸರ್ವೋಚ್ಚ ನ್ಯಾಯಾಲಯ ವಿಲೇವಾರಿ ಮಾಡಿದೆ. ಮೂಲ ದಾವೆಯನ್ನು, ನಲವತ್ತು ದಿನಗಳ ಸತತ ವಿಚಾರಣೆಯ ನಂತರ, ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ವಿವಾದಿತ ಜಮೀನನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ ನೀಡುವುದು. ಮತ್ತು, ಕೇಂದ್ರ ಸರ್ಕಾರ ವಶದಲ್ಲಿದ್ದ ಭೂಮಿಯಲ್ಲಿ ಸುನ್ನಿ ವಕ್ಫ್ ಬೋರ್ಡಿಗೆ ೫ ಎಕರೆ ನೀಡುವ ಆದೇಶವನ್ನು ನೀಡಿದೆ. ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ ಅಯೋಧ್ಯೆ ವಿಚಾರಣೆಯ ವೇಳೆ, ನಡೆದ ಅಪರೂಪದ ಘಟನೆ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಂದ ನಂತರ, ಈಗ ಮತ್ತೆ ಸುದ್ದಿಯಾಗುತ್ತಿದೆ.
     ಇದು, ಸಿಜೆಐ ಗೊಗೊಯ್, ರಾಮಲಲ್ಲಾ ಪರವಾಗಿ ವಾದಿಸಿದ ವಕೀಲರಿಗೆ ನೀಡಿದ್ದ ಅಪರೂಪದ ಆಫರ್ ಆಗಿತ್ತು. ರಾಮಲಲ್ಲಾ ಪರವಾಗಿ ವಾದಿಸುತ್ತಿದ್ದವರು ಚೆನ್ನೈ ಮೂಲದ ಹಿರಿಯ ವಕೀಲ, ಮಾಜಿ ಅಟಾರ್ನಿ ಜನರಲ್ ೯೩ರ ಹರೆಯದ ಕೇಶವ್ ಪರಾಶರನ್. ಕಳೆದ ಕೆಲವು ವರ್ಷಗಳಿಂದ, ಪ್ರತೀ ವಿಚಾರಣೆಯ ವೇಳೆಯೂ ಚೆನ್ನೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದವರು.
       'ಭಾರತದ ವಕೀಲರ ಪಿತಾಹಮ' ಎಂದೇ ಕರೆಯಲ್ಪಡುವ ಪರಶರನ್ ಹುಟ್ಟಿದ್ದು ೦೯.೧೦.೧೯೨೭ರಲ್ಲಿ. ೧೯೮೩ ಮತ್ತು ೧೯೮೯ರಲ್ಲಿ. ಭಾರತದ ಅಟಾರ್ನಿ ಜನರಲ್ ಆಗಿ ಇವರು ಕೆಲಸ ನಿರ್ವಹಿಸಿದ್ದವರು. ಆಗಸ್ಟ್ ತಿಂಗಳಲ್ಲಿ, ಅಯೋಧ್ಯೆ ಕೇಸನ್ನು ಐದು ನ್ಯಾಯಮೂರ್ತಿಗಳ ಬೆಂಚ್ ಮೂಲಕ ಡೈಲಿ ವಿಚಾರಣೆ ನಡೆಸುವ ತೀರ್ಮಾನಕ್ಕೆ ಸುಪ್ರೀಂಕೋರ್ಟ್ ಬಂದಿತ್ತು. ಸುನ್ನಿ ವಕ್ಫ್ ಬೋರ್ಡ್ ವಕೀಲ ರಾಜೀವ್ ಧವನ್ ಸಿಜಿಐ ರಂಜನ್ ಗೊಗೊಯ್ ಈ ತೀರ್ಮಾನವನ್ನು ಪ್ರಕಟಿಸಿದಾಗ, ಸನ್ನಿ ವಕ್ಫ್ ಬೋರ್ಡ್ ವಕೀಲ ರಾಜೀವ್ ಧವನ್, ಸಿಜಿಐ ಅವರಲ್ಲಿ ಮನವಿಯೊಂದನ್ನು ಮಾಡಿದ್ದರು."ನನ್ನ ವಿರೋಧಿ ವಕೀಲರಾದ ಪರಶರನ್ ವಯಸ್ಸಿನಲ್ಲಿ ತುಂಬಾ ಹಿರಿಯರು. ಪ್ರತೀದಿನ ತನ್ನ ಕಕ್ಷಿದಾರರ ಪರ ವಾದ ಮಂಡಿಸಲು, ವಿಚಾರಣೆಗೆ ಬರಲು ಅವರಿಗೆ ಕಷ್ಟವಾದೀತು" ಎಂದು ಮನವಿ ಮಾಡಿದ್ದರು.
     ಇದಕ್ಕೆ ಪರಶರನ್ ಅವರು, "ನನಗೆ ಯಾವುದೇ ಅಭ್ಯಂತರವಿಲ್ಲ. ಸುಪ್ರೀಂಕೋರ್ಟ್ ಪ್ರತೀದಿನ ವಿಚಾರಣೆ ಕೈಗೆತ್ತಿಕೊಳ್ಳುತ್ತಿರುವುದೇ ಖುಷಿಯ ವಿಚಾರ. ನಾನು ಕೊನೆಯುಸಿರು ಎಳೆಯುವ ಮುನ್ನ, ಅಯೋಧ್ಯೆ ಕೇಸಿನ ತೀರ್ಪು ಹೊರಬಿದ್ದರೆ ಸಾಕು. ನಾನು ಪ್ರತೀದಿನ ವಾದ ಮಂಡಿಸಲು ಬರುವೆ" ಎನ್ನುವ ಮಾತನ್ನು ಹೇಳಿದ್ದರು.
   ಈ ಸಂದರ್ಭ ಸಿಜಿಐ ಅವರಿಗೊಂದು ಆಫರ್ ನೀಡುತ್ತಾರೆ. ಸಿಜೆಐ "ನೀವು ಕುಳಿತುಕೊಂಡೇ ವಾದ ಮಂಡಿಸಲು ಬಯಸುತ್ತೀರಾ" ಎನ್ನುವ ಆಫರ್  ನೀಡುತ್ತಾರೆ. ಆಗ, ಪರಶರನ್ ನಯವಾಗಿ ಸಿಜಿಐ ನೀಡಿದ ಆಫರ್ ಅನ್ನು ತಿರಸ್ಕರಿಸುತ್ತಾ, ನೀಡಿದ ಹೇಳಿಕೆಗೆ, ಕೋರ್ಟ್ ಹಾಲ್ ನಲ್ಲಿ ವ್ಯಾಪಕ ಕರತಾಡನ ವ್ಯಕ್ತವಾಯಿತು.
     "ಇಲ್ಲ ಯುವರ್ ಆನರ್. ನಾನು ನಿಂತುಕೊAಡೇ ನನ್ನ ಕಕ್ಷಿದಾರರ ಪರವಾಗಿ ವಾದ ಮಂಡಿಸುತ್ತೇನೆ. ನಿಂತು ಕೊಂಡೇ ವಾದ ಮಾಡುವುದು ಭಾರತದ ವಕೀಲ ಹುದ್ದೆಯ ಸಂಸ್ಕೃತಿ. ಇದನ್ನು ನಾನು ಬ್ರೇಕ್ ಮಾಡಲು ಇಷ್ಟ ಪಡುವುದಿಲ್ಲ" ಎನ್ನುವ ಪರಶರನ್ ಹೇಳಿಕೆ ವ್ಯಾಪಕ ಪ್ರಶಂಸೆಗೆ ಒಳಗಾಯಿತು. ಪರಶರನ್, ಶಬರಿಮಲೆ ಕೇಸ್ ನಲ್ಲಿ ನಾಯರ್ ಸರ್ವಿಸ್ ಸೊಸೈಟಿ ಪರವಾಗಿಯೂ ವಾದ ಮಂಡಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries