ಮುಳ್ಳೇರಿಯ: ಕೇರಳ ಸರಕಾರದ ಶಿಕ್ಷಣ ಇಲಾಖೆಯ *ವಿದ್ಯಾಲಯ ಪ್ರತಿಭೆಗಳೊಂದಿಗೆ* ಯೋಜನೆಯಂಗವಾಗಿ ಕಾರಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಯಕ್ಷಗಾನ ಅರ್ಥದಾರಿ, ವಿದ್ವಾಂಸ ಶ್ರೀ ನಾರಾಯಣ ಮಣಿಯಾಣಿ ಬೆಳ್ಳಿಗೆಯವರನ್ನು ಸಂದರ್ಶಿಸಿದರು. ಮುಳ್ಳೇರಿಯದ ಅವರ ಸ್ವಗೃಹದಲ್ಲಿ ಪುಟ್ಟ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವಾರ್ಪಣೆ ನಡೆಯಿತು. ತಂಡದಲ್ಲಿದ್ದ ಹಿರಿಯ ಶಿಕ್ಷಕ ಕೃಷ್ಣೋಜಿ ರಾವ್ ಅವರು ಶಾಲೆಯ ಪರವಾಗಿ ಸಾಧಕ ಬೆಳ್ಳಿಗೆಯವರನ್ನು ಗೌರವಿಸಿದರು.
ತಮ್ಮ ಬಾಲ್ಯ, ಶಿಕ್ಷಣ, ಉದ್ಯೋಗ, ಕಲೆ, ಧಾರ್ಮಿಕ, ಕೃಷಿ ಹೀಗೆ ಜೀವನದ ವಿವಿಧ ಮಜಲುಗಳ ಪರಿಪಕ್ವ ಅನುಭವಗಳನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ಶ್ರೀಯುತರು ವಿವರಿಸಿದರು. ಕೊನೆಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದದಲ್ಲಿಯೂ ವಿದ್ಯಾರ್ಥಿಗಳು ಪಾಲ್ಗೊಂಡರು. ಹಿತೈಶಿ, ಶರಣ್ಯ ಮತ್ತು ದೀಪಾ ಪ್ರಾರ್ಥಿಸಿದರು. ಶರತ್ ಸ್ವಾಗತಿಸಿದರು. ವಿಶ್ಮಿತಾ ವಂದನಾರ್ಪಣೆಗೈದರು. ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶ್ರೀಶ ಪಂಜಿತ್ತಡ್ಕ, ರತೀಶ್ ಕುಮಾರ್, ಪುಷ್ಪಾ ಮಾರ್ಗದರ್ಶನ ಮಾಡಿದರು.