ಮಂಜೇಶ್ವರ: ಮಜಿಬೈಲು ಕೊಡ್ಡೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಗುರುವಾರ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪುಟಾಣಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಮಾರಂಭವನ್ನು ಮೀಂಜ ಗ್ರಾ.ಪಂ.ಸದಸ್ಯ ಪಿ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯತತ್ಪರತೆ ಹಾಗೂ ಮಕ್ಕಳ ಚಟುವಟಿಕೆಗಳನ್ನು ಶ್ಲಾಘಿಸಿದರು.
ಅಂಗನವಾಡಿ ಅಭಿವೃದ್ದಿ ಸಮಿತಿ ಅಧ್ಯಕ್ಷ ಕೆ.ಅಣ್ಣಪ್ಪ ಹೆಗ್ಡೆ ಗುತ್ತಿನಕಂಡ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಮಂಜಯಹಿತ್ಲು, ಕಿರಣ್ ಆಳ್ವ ಪಟ್ಟತ್ತಮೊಗರು ಉಪಸ್ಥಿತರಿದ್ದು ಶುಭ ಹಾರೈಸಿದರು. ಪುಟಾಣಿಗಳ ಹೆತ್ತವರು, ಸ್ಥಳೀಯರು ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ದಿವ್ಯಲತಾ ಎನ್. ಸ್ವಾಗತಿಸಿ, ರಶ್ಮಿತಾ ವಂದಿಸಿದರು. ಸಿಹಿತಿಂಡಿ ವಿತರಿಸಲಾಯಿತು.