ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಂಜೇಶ್ವರ ತಾಲೂಕು ಇದರ ವರ್ಕಾಡಿ ಪಂಚಾಯತಿಗೊಳಪಟ್ಟ ಭಜನಾ ಮಂಡಳಿಗಳ ಸಮಾವೇಶ ದೈಗೋಳಿಯ ರಾಮಕೃಷ್ಣ ಭಜನಾ ಮಂದಿರದಲ್ಲಿ ಭಾನುವಾರ ಜರಗಿತು.
ಸಮಾವೇಶದ ಅಧ್ಯಕ್ಷತೆಯನ್ನು ರಾಮಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಗೋಪಾಲಕೃಷ್ಣ ವಹಿಸಿದ್ದರು. ಧರ್ಮಸ್ಥಳ ಭಜನಾ ಪರಿಷತ್ ಮಂಜೇಶ್ವರ ತಾಲೂಕು ಅಧ್ಯಕ್ಷ ದಿನೇಶ್ ಚೆರುಗೋಳಿ, ಕಾರ್ಯದರ್ಶಿ ರಾಮಕೃಷ್ಣ ಮೀಯಪದವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಮಲ್ಲಿಕಾ, ಪಂಚಾಯತಿ ಸದಸ್ಯ ಆನಂದ, ಭಜನಾ ಪರಿಷತ್‌ನ ವರ್ಕಾಡಿ ವಲಯ ಕಾರ್ಯದರ್ಶಿ ಯಶೋದ ಉಪಸ್ಥಿತರಿದ್ದರು.
ವರ್ಕಾಡಿ ಪಂಚಾಯತಿಯ ಒಟ್ಟು ೨೨ ಭಜನಾ ಮಂಡಳಿಗಳ ಸದಸ್ಯರು ಸಹಿತ ೮೦ ಮಂದಿ ಭಾಗವಹಿಸಿದ್ದರು. ಸಮಾವೇಶದ ಮೊದಲು ಜ್ಞಾನೋದಯ ಸಮಾಜದ ಶ್ರೀ ಗಣೇಶ ಮಂದಿರದಿAದ ಭಜನಾ ಸಂಕೀರ್ತನೆ ಪ್ರಾರಂಭಿಸಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ಸಂಪನ್ನಗೊAಡಿತು. ಸತ್ಯನಾರಾಯಣ ಭಟ್ ದೈಗೋಳಿ ಸ್ವಾಗತಿಸಿ, ವಂದಿಸಿದರು. ಶಂಕರನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಂಜೇಶ್ವರ ತಾಲೂಕು ಮಟ್ಟದ ಭಜನಾ ಸಂಗಮ, ಭಜನಾ ಮಹೋತ್ಸವ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನ.೧೭ ರಂದು ನಡೆಯಲಿದೆ.