ಕುಂಬಳೆ: ವರ್ಷಂಪ್ರತಿ ಕುಂಬಳೆಯಲ್ಲಿ ನಡೆಯುವ ಶ್ರೀ ಅಯ್ಯಪ್ಪ ದೀಪೋತ್ಸವ ಡಿ.೨೧ ಮತ್ತು ೨೨ ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ದೀಪೋತ್ಸವದ ಪೂರ್ವಭಾವಿ ಸಾರ್ವಜನಿಕ ಸಭೆ ಕುಂಬಳೆ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಎಂ.ರಾಮಚAದ್ರ ಗಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ವಿ.ಶಿವರಾಮ ಕಡಪ್ಪುರ, ಅಧ್ಯಕ್ಷರಾಗಿ ಮನೋಜ್ ಕುಮಾರ್ ಸಿ, ಉಪಾಧ್ಯಕ್ಷರುಗಳಾಗಿ ವಿವೇಕಾನಂದ ಗುರುಸ್ವಾಮಿ, ಬಾಬು ರಾಜ್ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ರೈ, ಜೊತೆ ಕಾರ್ಯದರ್ಶಿಯಾಗಿ ರಾಜ ಆರಿಕ್ಕಾಡಿ, ಲೋಕನಾಥ ಶೆಟ್ಟಿ, ಕೋಶಾಧಿಕಾರಿಯಾಗಿ ನ್ಯಾಯವಾದಿ ಕೆ.ರಾಮ ಪಾಟಾಳಿ, ಲೆಕ್ಕ ಪರಿಶೋಧಕರಾಗಿ ಸುರೇಶ್ ಕೆ.ಶಾಂತಿಪಳ್ಳ, ಜಯಪ್ರಕಾಶ್ ಕೆ.ವಿ. ಹಾಗು ಎಕ್ಸಿಕ್ಯೂಟೀವ್ ಸಮಿತಿ ಸದಸ್ಯರಾಗಿ ಕರಿಯಪ್ಪ ಆಲಿಯಾಸ್ ಕರುಣಾಕರ, ಕೆ.ಶಂಕರ ಆಳ್ವ ಗುರುಸ್ವಾಮಿ, ಕೆ.ಲಕ್ಷ್ಮಣ ಪ್ರಭು, ಸಂಜೀವ ಅಮೀನ್, ಎಂ.ನಾ.ಚAಬಲ್ತಿಮಾರ್, ಶ್ರೀಧರ, ನಾರಾಯಣ ಗುರುಸ್ವಾಮಿ, ರವಿ ಗುರುಸ್ವಾಮಿ, ಪ್ರಶಾಂತ ಕುಮಾರ್ ಕೆ, ಅಮರ್‌ನಾಥ್ ಗುರುಸ್ವಾಮಿ, ರಾಜನ್ ಕಡಪ್ಪುರ, ಹರೀಶ್ ಪೇರಾಲ್ ಕಣ್ಣೂರು ಅವರನ್ನು ಆರಿಸಲಾಯಿತು.
ವಾರದ ಎಲ್ಲಾ ಭಾನುವಾರ ಬೆಳಗ್ಗೆ ೧೦ ಗಂಟೆಗೆ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಉತ್ಸವ ಸಮಿತಿ ಸೇರಲು ತೀರ್ಮಾನಿಸಲಾಯಿತು. ಇತರ ಉಪ ಸಮಿತಿಗಳನ್ನು ಮುಂದಿನ ದಿನಗಳಲ್ಲಿ ರಚಿಸಲಾಗುವುದು. ನಾರಾಯಣ ರೈ ಅವರು ಸ್ವಾಗತಿಸಿ, ಬಾಬುರಾಜ್ ವಂದಿಸಿದರು.