ಕಾಸರಗೋಡು: ಕೆ.ಪಿ.ಸಿ.ಸಿ.-ಒ.ಬಿ.ಸಿ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆರ್.ಶಂಕರ್ ಸಂಸ್ಮರಣೆ ಕಾರ್ಯಕ್ರಮ ಜರಗಿತು.
ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಒಬಿಸಿ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ವಿ.ಭರತನ್ ಅಧ್ಯಕ್ಷತೆ ವಹಿಸಿದರು. ನೇತಾರರಾದ ನ್ಯಾಯವಾದಿ ಕೆ.ಕೆ.ರಾಜೇಂದ್ರನ್, ಕೆ.ಪಿ.ಪ್ರಕಾಶನ್, ರಾಧಾಕೃಷ್ಣನ್ ನಾಯರ್ ನೀಲೇಶ್ವರ, ಪಿ.ವಿ.ಸುರೇಶ್, ಮೊಹಮ್ಮದ್ ಕುಂಞÂ, ರಮೇಶನ್ ಕರುವಚ್ಚೇರಿ, ಬಾಬು, ನಾಸರ್, ನವೀಂದ್ರ ನಾಯ್ಕ್, ಉಮ್ಮರ್, ಸಿ.ಚಂದ್ರನ್, ರವೀಂದ್ರನ್ ಕೊಕ್ಕೋಟ್, ಅಬ್ಬಾಸ್, ರೋಹಿಣಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಕೆ. ಸ್ವಾಗತಿಸಿ, ವಂದಿಸಿದರು.