ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ೬ನೇ ವಾರ್ಡು ಗ್ರಾಮಸಭೆಯು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಮಂಗಳವಾರ ನಡೆಯಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿ ವಿವಿಧ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು. ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ೨ನೇ ವಾರ್ಡು ಸದಸ್ಯ ಡಿ.ಶಂಕರ, ಎಂ.ಎನ್.ಆರ್.ಜಿ.ಯ ರಜಿತ, ಕೃಷಿ ಇಲಾಖೆಯ ಮೋಹನ್ ಕುಮಾರ್ ಪಾಲ್ಗೊಂಡಿದ್ದರು. ವಾರ್ಡು ಪ್ರತಿನಿಧಿ ವಿಶ್ವನಾಥ ಪ್ರಭು ಕರಿಂಬಿಲ ಸ್ವಾಗತಿಸಿ ವಾರ್ಡಿನ ಪ್ರಗತಿಯನ್ನು ಹಾಗೂ ಮುಂದೆ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ವಿವರಿಸಿದರು.
ಕೆಡೆಂಜಿ ೬ನೇ ವಾರ್ಡು ಗ್ರಾಮಸಭೆ ಸಂಪನ್ನ
0
ನವೆಂಬರ್ 06, 2019